ಕಾರ್ಕಳ: ರಾಮಸಮುದ್ರದಲ್ಲಿ ಮುಳುಗಿ ಮಹಿಳೆ, ಬಾಲಕಿ ಮೃತ್ಯು

ಕಾರ್ಕಳ: ಐತಿಹಾಸಿಕ ರಾಮಸಮುದ್ರದಲ್ಲಿ ಸ್ನಾನಮಾಡಲೆಂದು ನೀರಿಗೆ ಇಳಿದ ಮಹಿಳೆ ಹಾಗೂ ಬಾಲಕಿ ನೀರುಪಾಲಾದ ಘಟನೆ ಶುಕ್ರವಾರ ಸಂಭವಿಸಿದೆ.
ಮೂಲತಃ ಭದ್ರಾವತಿಯ, ಪ್ರಸ್ತುತ ಮಾರ್ಕೆಟ್ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮೋಹನ್ ಎಂಬವರ ಪತ್ನಿ ಕವಿತಾ (26) ಹಾಗೂ ಆಂಧ್ರಪ್ರದೇಶ ಮೂಲದವರಾಗಿದ್ದು ಕಾಬೆಟ್ಟಿನಲ್ಲಿ ನೆಲೆಸಿರುವ ವಾಣಿ ಎಂಬವರ ಪುತ್ರಿ ದೀಕ್ಷಿತಾ (12) ಮೃತರು ಎಂದು ಗುರುತಿಸಲಾಗಿದೆ.
ದೀಕ್ಷಿತಾ ನೀರಿನಲ್ಲಿ ಇಳಿಯುತ್ತಿದ್ದಂತೆ ಕಾಲು ಜಾರಿರುವುದನ್ನು ಕಂಡು ಕವಿತಾ ಆಕೆಯನ್ನು ಪಾರುಮಾಡಲು ನೀರಿಗೆ ಇಳಿದಿದ್ದಾರೆ. ಈ ವೇಳೆ ಅವರಿಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





