ಎಸ್ಸೈಗೆ ಲಾಠಿಯಲ್ಲಿ ತಿವಿದ ಯುವಕ: ದೂರು
ಅಮಾಸೆಬೈಲು, ಮಾ.27: ಅಮಾಸೆಬೈಲು ಪೊಲೀಸ್ ಠಾಣಾ ಎಸ್ಸೈಯ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಮಾ26ರಂದು ಮಧ್ಯಾಹ್ನ ವೇಳೆ ರಟ್ಟಾಡಿ ಗ್ರಾಮದ ರಟ್ಟೇಶ್ವರ ದೇವಸ್ಥಾನದ ಸಭಾಭವನದ ಎದುರು ನಡೆದಿದೆ.
ಮುಂಜಾಗ್ರತಾ ಕ್ರಮಗಳನ್ನು ವಹಿಸದೆ ರಸ್ತೆಯಲ್ಲಿ ತನ್ನ ಬೈಕಿನಲ್ಲಿ ಹೋಗುತ್ತಿದ್ದ ಹೊಳೆಬಾಗಿಲುವಿನ ನಾಗರಾಜ ಪೂಜಾರಿ(25) ಎಂಬಾತನ್ನು ಎಸ್ಸೈ ಅನಿಲ್ ಕುಮಾರ್ ಪ್ರಶ್ನಿಸಿದ್ದು, ಇದಕ್ಕೆ ಆತ ಎಸ್ಸೈಗೆ ಉಡಾಫೆಯಿಂದ ಮಾತನಾಡಿ ಕೈಯಿಂದ ದೂಡಿ, ಅವರ ಕೈಯಲ್ಲಿದ್ದ ಲಾಠಿಯನ್ನು ಕಸಿದುಕೊಂಡು ತಿವಿದು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿದೆ ದೂರಲಾಗಿದೆ. ಈ ಬಗ್ಗೆ ಅಮಾಸೆ ಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





