5 ನಿಮಿಷಗಳಲ್ಲಿ ಕೊರೋನ ಸೋಂಕು ಪತ್ತೆ ಹಚ್ಚುತ್ತದೆ ಈ ಕಿಟ್ !
ವಾಶಿಂಗ್ಟನ್, ಮಾ. 28: ನೋವೆಲ್-ಕೊರೋನವೈರಸ್ ಸೋಂಕಿದೆಯೇ ಎನ್ನುವುದನ್ನು ಕೇವಲ ಐದು ನಿಮಿಷಗಳಲ್ಲಿ ಪತ್ತೆಹಚ್ಚಿ ಹೇಳಬಲ್ಲ ಪರೀಕ್ಷಾ ಕಿಟ್ ಒಂದನ್ನು ಅಮೆರಿಕದ ಪ್ರಯೋಗಾಲಯವೊಂದು ಅನಾವರಣಗೊಳಿಸಿದೆ.
ಕೈಯಲ್ಲಿ ಒಯ್ಯಬಹುದಾದ ಈ ಪರೀಕ್ಷಾ ಕಿಟ್ಟನ್ನು ಮುಂದಿನ ವಾರದಲ್ಲೇ ಆರೋಗ್ಯ ಸೇವೆಗಳನ್ನು ನೀಡುವವರಿಗೆ ಒದಗಿಸಲು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ ತುರ್ತು ಅನುಮೋದನೆ ನೀಡಿದೆ ಎಂದು ಶುಕ್ರವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯೊಂದರಲ್ಲಿ ಅಬಾಟ್ ಲ್ಯಾಬೊರೇಟರೀಸ್ ತಿಳಿಸಿದೆ.
ಈ ಪರೀಕ್ಷಾ ಕಿಟ್ ಸಣ್ಣ ಟೋಸ್ಟರ್ ಗಾತ್ರದ್ದಾಗಿದ್ದು, ಅಣು ತಂತ್ರಜ್ಞಾನವನ್ನು ಬಳಸುತ್ತದೆ ಎಂದು ಅದು ಹೇಳಿದೆ. ಯಾರಲ್ಲಾದರೂ ಕೋವಿಡ್-19 ಸೋಂಕು ಇಲ್ಲದಿದ್ದರೆ 13 ನಿಮಿಷಗಳಲ್ಲಿ ಕಿಟ್ ದೃಢಪಡಿಸುತ್ತದೆ ಎಂದು ಅಬಾಟ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಬರ್ಟ್ ಪೋರ್ಡ್ ಹೇಳಿದರು.
‘‘ಈ ಕಿಟ್ನ ಸಣ್ಣ ಗಾತ್ರದಿಂದಾಗಿ, ಅದನ್ನು ಆಸ್ಪತ್ರೆಗಳ ಹೊರಗೂ ಕೊಂಡೊಯ್ದು ಬಳಸಬಹುದಾಗಿದೆ’’ ಎಂದು ಫೋರ್ಡ್ ನುಡಿದರು.
Next Story