Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಟ್ಟರು ಯಾಕೆ ಕೊರೋನ ಹಾಡು ಬರೆಯಲಿಲ್ಲ...

ಭಟ್ಟರು ಯಾಕೆ ಕೊರೋನ ಹಾಡು ಬರೆಯಲಿಲ್ಲ ಗೊತ್ತೇ..?!

ಸಂದರ್ಶನ: ಶಶಿಕರ ಪಾತೂರುಸಂದರ್ಶನ: ಶಶಿಕರ ಪಾತೂರು28 March 2020 11:04 PM IST
share
ಭಟ್ಟರು ಯಾಕೆ ಕೊರೋನ ಹಾಡು ಬರೆಯಲಿಲ್ಲ ಗೊತ್ತೇ..?!

ಯೋಗರಾಜ್ ಭಟ್ಟರೆಂದರೆ ಕನ್ನಡ ಸಿನಿರಸಿಕರಲ್ಲಿ ಒಂದು ನಿರೀಕ್ಷೆ ಇದ್ದೇ ಇರುತ್ತದೆ. ಆ ನಿರೀಕ್ಷೆ ಏನೆಂದರೆ ಅವರು ನಮ್ಮ ನಿರೀಕ್ಷೆಯನ್ನು ಮೀರಿ ಏನಾದರೂ ಮಾಡುತ್ತಾರೆ ಎನ್ನುವುದೇ ನಿರೀಕ್ಷೆ. ಸಾಮಾನ್ಯವಾಗಿ ಯಾವುದೇ ಸಾಮಾಜಿಕ ಘಟನೆಗಳಿಗೆ ಯೋಗರಾಜ್ ಭಟ್ಟರು ತಕ್ಷಣದ ಪ್ರತಿಕ್ರಿಯೆಯನ್ನು ತಮ್ಮ ಮೊನಚಾದ ಲೇಖನಿಯ ಮೂಲಕ ನೀಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಬಹಳಷ್ಟು ಬಾರಿ ಅವು ಹಾಡುಗಳ ರೂಪದಲ್ಲಿರುತ್ತವೆ. ಉಳಿದವುಗಳು ಸಿನೆಮಾಗಳ ಪಾತ್ರಗಳ ಮೂಲಕ, ಸಂಭಾಷಣೆಗಳ ಮೂಲಕ, ದೃಶ್ಯಗಳ ಮೂಲಕ ಅವರು ಹೊರಗೆಡಹುವುದನ್ನು ಕಂಡಿದ್ದೇವೆ. ಆ ನಿಟ್ಟಿನಲ್ಲಿ ಈ ಬಾರಿ ಕೊರೋನ ವೈರಸ್ ಕುರಿತಾದ ಗೀತೆಯೊಂದು ಅವರ ಕಡೆಯಿಂದ ಬಂದೇ ಬರುವುದೆನ್ನುವ ನಂಬಿಕೆ ಹಲವರಲ್ಲಿತ್ತು. ಆದರೆ ಭಟ್ಟರು ಆ ನಿರೀಕ್ಷೆಯನ್ನು ಸುಳ್ಳು ಮಾಡಿದ್ದಾರೆ. ಅದು ಯಾಕೆ ಮತ್ತು ಈ ದಿನಗಳನ್ನು ಹೇಗೆ ಕಳೆಯುತ್ತಿದ್ದಾರೆ ಎನ್ನುವ ಪ್ರಶ್ನೆಗಳಿಗೆ ಅವರು 'ವಾರ್ತಾಭಾರತಿ'ಯ ಮೂಲಕ ಉತ್ತರಿಸಿದ್ದಾರೆ.

  ಕರ್ಫ್ಯೂನಲ್ಲಿ ಹೇಗಿದ್ದೀರಿ ಭಟ್ಟರೇ?
 
 ಆರಾಮ. ಬರವಣಿಗೆ, ಓದುವುದು ಮತ್ತು ಸಂಗೀತ ಕೇಳುವುದು ಇವುಗಳಲ್ಲೇ ಜೀವನ ಸಾಗುತ್ತಿದೆ. ‘ಗಾಳಿಪಟ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಗೆ ಸಂಬಂಧಿಸಿದಂತೆ ಸಂಕಲನ ಮಾಡುವ ತನಕದ ಕೆಲಸಗಳು ನಡೆದಿವೆ. ದೀಪು ನೀಟಾಗಿ ಎಲ್ಲ ಮುಗಿಸಿದ್ದಾನೆ. ಚಿತ್ರದ ಇನ್ನೊಂದಷ್ಟು ಭಾಗ ಪೋಲ್ಯಾಂಡ್ ನಲ್ಲಿ ಚಿತ್ರೀಕರಣದ ಯೋಜನೆ ಹಾಕಿದ್ದೆವು. ಅಷ್ಟರಲ್ಲಿ ಹೀಗಾಯಿತು.

ನಿಮಗೆ ಯಾವತ್ತಾದರೂ ಇಂತಹದೊಂದು ವೈರಸ್ ಕಾಟವಾಗುವ ಕಲ್ಪನೆ ಇತ್ತೇ?

 ಹಿಂದೆ ನಾನು ಒಂದು ಇಂಗ್ಲಿಷ್ ಸೀರೀಸ್ ನೋಡುತ್ತಿದ್ದೆ. ಅದರ ಹೆಸರು ‘ಎಎಕ್ಸ್‌ಎನ್ 24’ ಎಂದು. ಅದರಲ್ಲಿ ಬಯಾಲಾಜಿಕಲ್ ಅಟ್ಯಾಕ್ ಆಗಲಿದೆ ಎಂದು ಗೊತ್ತಾದಾಗ ಹೊಟೇಲ್‌ನಲ್ಲಿ ಇರುವ ಎಲ್ಲ ಗ್ರಾಹಕರನ್ನು, ಸೇವಾ ನಿರತರನ್ನು ಪೊಲೀಸರು ಕೂಡಿ ಹಾಕಿರುತ್ತಾರೆ. ಆಗ ಒಬ್ಬನಿಂದ ಎಷ್ಟು ಜನಕ್ಕೆ ಬರುತ್ತದೆ ಎಂದು ಹುಡುಕಿದಾಗ ಒಂಥರಾ ಹೆದರಿಕೆ ಆಗಿ ಬಿಟ್ಟಿತ್ತು. ಹೀಗೆಲ್ಲ ಆದರೆ ಏನಾಗಿಬಿಡಬಹುದು ಪ್ರಪಂಚ ಎಂದು ಆತಂಕವಾಗಿತ್ತು.

ಒಂದು ವೇಳೆ ಹೊರಗೆ ತಿರುಗಾಡಬಹುದು ಎಂದು ಇದ್ದಲ್ಲಿ ನೀವೇನು ಮಾಡುತ್ತಿದ್ದಿರಿ?
ನಾನು ಒಂಥರಾ ತಿರುಗಾಡೋ ತಿಪ್ಪ. ಯೋಜನೆಗಳಿಲ್ಲದೇ ತಿರುಗಾಡೋನು ನಾನು. ಪ್ರತಿ ವರ್ಷ ಸುಮಾರು ಆರು ತಿಂಗಳ ಕಾಲ ಸುತ್ತಾಟದಲ್ಲೇ ಕಳೆದು ಹೋಗುತ್ತದೆ. ಗ್ರಾಮೀಣ ಪ್ರದೇಶಗಳೇ ಇಷ್ಟ. ನಗರದಲ್ಲಿದ್ದು ಮಾಡುವುದಾದರೂ ಏನು? ಹಾಗಾಗಿ ಹಳ್ಳಿಗಾಡು, ಗ್ರಾಮೀಣ ಪ್ರದೇಶಗಳನ್ನು ಸುತ್ತುವ ಕಾರ್ಯಕ್ರಮ ಹಾಕುತ್ತಿದ್ದೆ.

 ನೀವೇಕೆ ಕೊರೋನ ಬಗ್ಗೆ ಜಾಗೃತಿ ಗೀತೆ ಬರೆಯಲಿಲ್ಲ?

ಈ ಬಾರಿ ಇಂಟರ್ನೆಟ್‌ನಲ್ಲಿ ನಾನೇ ತುಂಬ ಕಡೆಯಲ್ಲಿ ನೋಡಿದೆ. ಎಲ್ಲರೂ ಬರೆಯುತ್ತಿದ್ದಾರೆ. ಪಬ್ಲಿಕ್ ಕೂಡ ಬರೆಯುತ್ತಿದ್ದಾರೆ. ಬೇರೆಯವರು ಬರೆದಿರುವುದು ಕೂಡ ತುಂಬ ಚೆನ್ನಾಗಿಯೇ ಇದೆ ಅನಿಸಿತು. ಇನ್ನು ನಾನಾಗಿ ಏನು ಬರೆಯಲಿ ಅಂದುಕೊಂಡು ಸುಮ್ಮನಾದೆ. ಮಾತ್ರವಲ್ಲ, ಈಗ ಒಂದು ವೇಳೆ ಬರೆದರೆ ಕೂಡ ರೆಕಾರ್ಡಿಂಗ್ ಬೇರೆ ಮಾಡಬೇಕಲ್ವ? ಅದು ಕೂಡ ಸಾಧ್ಯವಾಗುತ್ತಿಲ್ಲ ಎನ್ನುವುದು ಸಮಸ್ಯೆ.

ನೀವು ಆ ಹಾಡಿನಲ್ಲಿ ನೀಡಬೇಕಾದ ಜಾಗೃತಿಯನ್ನು ಮಾತಿನಲ್ಲಿ ಹೇಗೆ ಹೇಳುತ್ತೀರಿ?
ಮನುಷ್ಯರು ಹೇಳಿದರೆ ಮನುಷ್ಯರಿಗೆ ಅರ್ಥವಾಗುವ ಕಾಲ ಹೋಗಿದೆ ಅನಿಸುತ್ತಿದೆ. ಪ್ರಕೃತಿಯೇ ಹೇಳಬೇಕು. ಅದನ್ನು ಪ್ರಕೃತಿ ಈಗ ವೈರಸ್ ರೂಪದಲ್ಲಿ ಹೇಳುತ್ತಿದೆ ಮುಚ್ಕೊಂಡು ಮನೇಲಿರಿ ಅಂತ. ನಾವು ಪ್ರಕೃತಿಯ ಮಾತನ್ನು ಕೇಳುವುದು ಯಾವಾಗಲೂ ಒಳ್ಳೆಯದು. ಸದ್ಯದ ಮಟ್ಟಿಗಂತೂ ಅದೇ ಅಂತಿಮ. ಬೇರೆ ಆಪ್ಷನ್ ಕೂಡ ಇಲ್ಲ. ನಮ್ಮ ವೈದ್ಯರುಗಳು ಹೇಳಿದರಾಗಲೀ, ಪೊಲೀಸ್ ಅಧಿಕಾರಿಗಳು ಹೇಳಿದಾಗ ಆಗಲೀ ನಾವು ಅದನ್ನು ಅನುಸರಿಸುವ ಮನಸು ಮಾಡುತ್ತಿಲ್ಲ. ಮನುಷ್ಯನ ಮೌಢ್ಯಕ್ಕೆ ಪ್ರಕೃತಿಯೇ ಬಂದು ಚುಚ್ಚು ಮದ್ದು ಕೊಟ್ಟಿದೆ ಎಂದು ಸುಮ್ಮನಿರಬೇಕಾದ ಕಾಲ ಇದು.

share
ಸಂದರ್ಶನ: ಶಶಿಕರ ಪಾತೂರು
ಸಂದರ್ಶನ: ಶಶಿಕರ ಪಾತೂರು
Next Story
X