Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮೊಬೈಲ್ ಒಟಿಪಿ ಮೂಲಕ ಪಡಿತರ ವಿತರಣೆಗೆ...

ಮೊಬೈಲ್ ಒಟಿಪಿ ಮೂಲಕ ಪಡಿತರ ವಿತರಣೆಗೆ ರಾಜ್ಯ ಸರಕಾರ ನಿರ್ಧಾರ

ವಾರ್ತಾಭಾರತಿವಾರ್ತಾಭಾರತಿ29 March 2020 6:24 PM IST
share
ಮೊಬೈಲ್ ಒಟಿಪಿ ಮೂಲಕ ಪಡಿತರ ವಿತರಣೆಗೆ ರಾಜ್ಯ ಸರಕಾರ ನಿರ್ಧಾರ

ಬೆಂಗಳೂರು, ಮಾ.29: ರಾಜ್ಯಾದ್ಯಂತ ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯವನ್ನು ಕಾಪಾಡುವ ಹಿತದೃಷ್ಟಿಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ಬಯೋಮೆಟ್ರಿಕ್ ನೀಡಿ, ಪಡಿತರ ಪಡೆಯುವ ಬದಲು ಪರ್ಯಾಯವಾಗಿ ಆಧಾರ್ ಆಧಾರಿತ ಮೊಬೈಲ್ ಒಟಿಪಿ ಮೂಲಕ ಪಡಿತರ ವಿತರಣೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಆಧಾರ್ ಆಧಾರಿತ ಮೊಬೈಲ್ ಒಟಿಪಿ ಮೂಲಕ ಪಡಿತರ ವಿತರಣೆಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಪಡಿತರ ಮೊಬೈಲ್ ಸಂಖ್ಯೆ ಆಧಾರ್‍ನಲ್ಲಿ ನೋಂದಾಯಿಸಲ್ಪಟ್ಟಿದ್ದರೆ ಮಾತ್ರ ಅಂತಹ ಪಡಿತರದಾರರ ಮೊಬೈಲ್‍ಗೆ ಒಟಿಪಿ ಬರುತ್ತದೆ. ನಂತರ ಅದನ್ನು ಪಡಿತರ ಚೀಟಿದಾರ ನ್ಯಾಯಬೆಲೆ ಅಂಗಡಿಯಲ್ಲಿ ತನ್ನ ಪಡಿತರ ಸಂಖ್ಯೆಯನ್ನು ನೀಡಬೇಕು.

ನ್ಯಾಯಬೆಲೆ ಅಂಗಡಿ ವರ್ತಕರು ಪಡಿತರಚೀಟಿ ಸಂಖ್ಯೆಯನ್ನು ದತ್ತಾಂಶದಲ್ಲಿ ನಮೂದಿಸುವರು. ಪಡಿತರಚೀಟಿಯಲ್ಲಿ ಲಭ್ಯವಿರುವ ಕುಟುಂಬದ ಸದಸ್ಯರ ಹೆಸರು, ದತ್ತಾಂಶದಲ್ಲಿ ದೊರೆಯಲಿದೆ. ನ್ಯಾಯಬೆಲೆ ಅಂಗಡಿಯ ವರ್ತಕರು ಪಡಿತರ ಪಡೆಯಲು ಬಂದಿರುವ ವ್ಯಕ್ತಿಯ ಹೆಸರನ್ನು ಆಯ್ದು, ದೃಢೀಕರಣದ ಪ್ರಕಾರವನ್ನು ಆರಿಸಬೇಕು.

ಇದರಲ್ಲಿ ಪಡಿತರ ಚೀಟಿದಾರದ ಮೊಬೈಲ್ ಸಂಖ್ಯೆ ಅಧಾರ್‍ನಲ್ಲಿ ನೋಂದಾಯಿಸಲು ಹಾಗೂ ಅವರು ಪಡಿತರ ಪಡೆಯುವ ವೇಳೆ ಮೊಬೈಲ್‍ನ್ನು ಅವರ ಬಳಿ ಹೊಂದಿರದ್ದಿದ್ದರೆ ಆಗ ನ್ಯಾಯಬೆಲೆ ಅಂಗಡಿ ವರ್ತಕನು ಒಟಿಪಿ ಎಂದು ಆಯ್ಕೆ ಮಾಡಿಕೊಂಡ ಬಳಿಕ ಮೊಬೈಲ್‍ಗೆ ಆಧಾರ್‍ನಿಂದ ಒಟಿಪಿ ಲಭ್ಯವಾಗುತ್ತದೆ.

ಪಡಿತರ ಚೀಟಿದಾರ ಆರು ಸಂಖ್ಯೆಯ ಒಟಿಪಿಯನ್ನು ದತ್ತಾಂಶದಲ್ಲಿ ನಮೂದಿಸಿದ ನಂತರ ದೃಢೀಕರಣಗೊಂಡು ಪಡಿತರ ಚೀಟಿದಾರರ ಹಂಚಿಕೆ ಲಭ್ಯವಾಗುತ್ತದೆ. ನ್ಯಾಯಬೆಲೆ ಅಂಗಡಿ ವರ್ತಕರು ದತ್ತಾಂಶದಲ್ಲಿ ಪಡಿತರ ವಿತರಣೆಗೆ ಅನುಮತಿ ನೀಡಿದರೆ ಪಡಿತರ ಚೀಟಿದಾರರಿಗೆ ರಶೀದಿ ನಮೂನೆ ಲಭ್ಯವಾಗಲಿದೆ.

ಆಧಾರ್ ಜೊತೆ ಮೊಬೈಲ್ ಸಂಖ್ಯೆ ನಮೂದಾಗದೆ ಇದ್ದರೆ ಏನು ಮಾಡಬೇಕು?: ನ್ಯಾಯಬೆಲೆ ಅಂಗಡಿ ವರ್ತಕರು ಪಡಿತರಚೀಟಿ ಸಂಖ್ಯೆಯನ್ನು ದತ್ತಾಂಶದಲ್ಲಿ ನಮೂದಿಸುವರು. ನಂತರ ಪಡಿತರ ಚೀಟಿಯಲ್ಲಿ ಲಭ್ಯವಿರುವ ಕುಟುಂಬದ ಸದಸ್ಯರ ಹೆಸರು, ದತ್ತಾಂಶದಲ್ಲಿ ಲಭ್ಯವಾಗಲಿದೆ. ನ್ಯಾಯಬೆಲೆ ಅಂಗಡಿ ವರ್ತಕರು ಪಡಿತರ ಪಡೆಯಲು ಬಂದಿರುವ ವ್ಯಕ್ತಿಯ ಹೆಸರನ್ನು ಆರಿಸಿಕೊಂಡ ನಂತರ ಪಡಿತರ ಚೀಟಿದಾರ ತನ್ನ ಬಳಿ ಇರುವ ಮೊಬೈಲ್ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿ ವರ್ತಕನಿಗೆ ನೀಡಬೇಕು.

ಆಗ ನ್ಯಾಯಬೆಲೆ ಅಂಗಡಿ ವರ್ತಕರು Mobile Authentication ನ್ನು ಆರಿಸಿಕೊಳ್ಳಬೇಕು.  ಇದರಲ್ಲಿ ಪಡಿತರ ಚೀಟಿದಾರ ತನ್ನದೇ ಕುಟುಂಬ ಸದಸ್ಯರ ಮೊಬೈಲ್ ಸಂಖ್ಯೆಯನ್ನು ನೀಡಿರುತ್ತಾನೆ. ಆ ಮೊಬೈಲ್ ಸಂಖ್ಯೆ ನಮೂದಿಸಬೇಕು. ದತ್ತಾಂಶದೊಂದಿಗೆ ಪರಿಶೀಲಿಸಿ, ಮೊಬೈಲ್ ಸಂಖ್ಯೆಗೆ ಪಡಿತರ ವಿತರಿಸುವುದಿಲ್ಲ ಎಂಬುದನ್ನು ದೃಢೀಕರಿಸಿಕೊಂಡು ನಂತರ ದತ್ತಾಂಶದಿಂದ ಒಟಿಪಿಯನ್ನು ನೀಡಲಾಗುವುದು.

ಈ ಒಟಿಪಿಯನ್ನು ನಮೂದಿಸಿ ಅನುಮೋದಿಸಿದ ಪಡಿತರ ವಿತರಣೆಗೆ ಅನುಮೋದನೆ ದೊರೆಯಲಿದೆ. ಈ ರೀತಿ ಸ್ವೀಕರಿಸಲಾಗುವ ಒಟಿಪಿ ಅವಧಿ 5 ನಿಮಿಷ ಮಾತ್ರ ಇರುತ್ತದೆ. ಆದ್ದರಿಂದ ತಕ್ಷಣ ಅದನ್ನು ನಮೂದಿಸಬೇಕು. ನಂತರ ಹಂಚಿಕೆ ವಿವರ ಲಭ್ಯವಾಗಲಿದೆ. ಅದನ್ನು ಅನುಮೋದಿಸಿ ಪಡಿತರ ವಿತರಿಸಬೇಕು.

ಪಡಿತರ ಚೀಟಿದಾರರು ಅವರ ಕುಟುಂಬದ ಸದಸ್ಯರ ಬಳಿಯಲ್ಲಿರುವ ಮೊಬೈಲ್‍ನ್ನು ತರಲು ತಿಳಿಸಬೇಕು. ಇದರಿಂದ ಕೋವಿಡ್-19 ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಣದಲ್ಲಿಡಲು ಅವಕಾಶವಾಗುತ್ತದೆ. ಒಂದೊಮ್ಮೆ ಪಡಿತರ ಚೀಟಿದಾರರ ಕುಟುಂಬದ ಸದಸ್ಯರಲ್ಲಿ ಮೊಬೈಲ್ ಇಲ್ಲದೇ ಇದ್ದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ಕಡೆಯ ಪ್ರಯತ್ನವಾಗಿ ಲಭ್ಯವಿರುವ ಬೆರಳಚ್ಚು ಬಯೋಮೆಟ್ರಿಕ್ ಆಧಾರಿತ ಪಡಿತರ ವಿತರಣೆಯನ್ನು ಮಾಡುವ ವ್ಯವಸ್ಥೆ ಮುಂದುವರೆಸಲಾಗಿದೆ.

ಶುಚಿತ್ವಕ್ಕೆ ಒತ್ತು: ಪ್ರತಿ ನ್ಯಾಯಬೆಲೆ ಅಂಗಡಿಯ ಬಳಿಯಲ್ಲಿ ನೀರು ಮತ್ತು ಶುದ್ಧೀಕರಿಸುವ ಸೋಪನ್ನು ಕಡ್ಡಾಯವಾಗಿ ಇಡಬೇಕು ಹಾಗೂ ಪಡಿತರ ಚೀಟಿದಾರರು ಬೆರಳಚ್ಚು ಬಯೋಮೆಟ್ರಿಕ್ ನೀಡುವ ಮೊದಲು ಸೋಪು ಮತ್ತು ನೀರಿನಲ್ಲಿ ಹಸ್ತವನ್ನು ಶುದ್ಧವಾಗಿ ತೊಳೆದುಕೊಳ್ಳಲು ಸೂಕ್ತ ನಿರ್ದೇಶನವನ್ನು ನೀಡಬೇಕು.

ಪಡಿತರ ಚೀಟಿದಾರರ ಬೆರಳಚ್ಚು ಸಂಗ್ರಹಿಸುವ ಪಾರದರ್ಶಕ ಸ್ಥಳವನ್ನು ಪ್ರತಿ ಪಡಿತರ ಚೀಟಿದಾರ ಬೆರಳಚ್ಚು ನೀಡುವ ಮೊದಲು ಸ್ಯಾನಿಟೈಸರ್‍ಗಳ ಮೂಲಕ ಶುದ್ಧೀಕರಣ ಮಾಡುವಂತೆ ಸೂಚಿಸಬೇಕು. ಇದಕ್ಕಾಗಿ ಒಳ್ಳೆಯ ಗುಣಮಟ್ಟದ ಸ್ಯಾನಿಟೈಸರ್ ಹಾಗೂ ಶುಭ್ರವಾದ ವಸ್ತ್ರವನ್ನು ಉಪಯೋಗಿಸಲು ಸೂಚಿಸಬೇಕು. ಪಡಿತರ ಚೀಟಿದಾರರಲ್ಲಿ ಶೀತ ಮತ್ತು ಕೆಮ್ಮಿನ ಲಕ್ಷಣಗಳು ಇರುವವರು ಅಂಗಡಿಗಳಿಗೆ ಆಗಮಿಸದಂತೆ ಸಾಕಷ್ಟು ಪ್ರಚಾರವನ್ನು ನೀಡಬೇಕು.

ಪಡಿತರ ಚೀಟಿದಾರರಿಗೆ ಪಡಿತರ ವಿತರಿಸುವುದರಿಂದ ಒಂದೇ ಮೊಬೈಲ್‍ಗೆ ಒಂದಕ್ಕಿಂತ ಹೆಚ್ಚಿನ ಪಡಿತರ ವಿತರಣೆ ಮಾಡಲು ಅವಕಾಶವಿರುವುದಿಲ್ಲ. ಯಾವುದೇ ಮೊಬೈಲ್ ಸಂಖ್ಯೆಯಿಂದ ಒಟಿಪಿಯನ್ನು ಪಡೆದುಕೊಂಡ ನಂತರ ಆ ಮೊಬೈಲ್ ಸಂಖ್ಯೆಗೆ ಹೊಂದಾಣಿಕೆಯಾಗಿರುವ ಪಡಿತರರು ಹಾಗೂ ಅದರಲ್ಲಿರುವ ಸದಸ್ಯರು ಹಾಗೂ ಅವರ ಮೊಬೈಲ್ ಸಂಖ್ಯೆಗಳನ್ನು ಬೇರೆ ಪಡಿತರಚೀಟಿದಾರರಿಗೆ ಉಪಯೋಗಿಸಲು ಅವಕಾಶವಿರುವುದಿಲ್ಲ.

ಈ ರೀತಿ ದತ್ತಾಂಶದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಗಿದೆ. ಆದ್ದರಿಂದ ಯಾವುದೇ ವ್ಯಕ್ತಿ ತನ್ನ ಮೊಬೈಲ್‍ನ್ನು ಇನ್ನೊಂದು ಪಡಿತರ ಚೀಟಿದಾರ ಪಡಿತರ ಪಡೆಯಲು ಉತ್ತೇಜಿಸದಂತೆ ಎಲ್ಲಾ ನ್ಯಾಯಬೆಲೆ ಅಂಗಡಿಯ ವರ್ತಕರಿಗೆ ಸೂಚಿಸಲಾಗಿದೆ.

ಖಾಸಗಿ ಮೊಬೈಲ್ ಉಪಯೊಗಿಸಿ ಪಡಿತರ ಪಡೆಯುವ ಪಡಿತರ ಚೀಟಿದಾರರಿಗೆ ಪಡಿತರ ವಿತರಿಸಿರುವುದನ್ನು ಆಹಾರ ನಿರೀಕ್ಷಕರು ಮತ್ತು ಜಿಲ್ಲೆಯ ಅಧಿಕಾರಿಗಳು ಪರಿಶೀಲಿಸಿಬೇಕು. ಸಂಬಂಧಿಸಿದ ಮೊಬೈಲ್‍ಗೆ ಕರೆ ಮಾಡಿ ದೃಢೀಕರಿಸಿಕೊಳ್ಳಬೇಕು. ಹಾಗೂ ಕಳೆದ ಆರು ತಿಂಗಳ ಎತ್ತುವಳಿ ಮತ್ತು ಮಾರ್ಚ್ ತಿಂಗಳ ಎತ್ತುವಳಿಯನ್ನು ಪರಿಶೀಲಿಸಿ ಯಾವುದಾದರೂ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡು ಬಂದಲ್ಲಿ ಅದನ್ನು ಪರಿಶೀಲಿಸುವ ಜವಾಬ್ದಾರಿ ಆಹಾರ ನಿರೀಕ್ಷಕರ ಕರ್ತವ್ಯವಾಗಿರುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X