ನಂಜಗೂಡಿನಲ್ಲಿ ಹೆಚ್ಚಿದ ಕೊರೋನಾ ಸೋಂಕಿತರ ಸಂಖ್ಯೆ: ರೆಡ್ ಅಲರ್ಟ್ ಘೋಷಿಸಿದ ಜಿಲ್ಲಾಧಿಕಾರಿ
ಮೈಸೂರು: ನಂಜನಗೂಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತಿದ್ದಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ರೆಡ್ ಅಲರ್ಟ್ ಘೋಷಣೆ ಮಾಡಿ ಆದೇಶಿಸಿದ್ದಾರೆ.
ಒಂದೇ ಕಂಪನಿಯ ನಂಜನಗೂಡಿನ ರಾಮಸ್ವಾಮಿ ಲೇಔಟ್, ಚಾಮಲಾಪುರದ ಹುಂಡಿ, ಗೋವಿಂದರಾಜ್ ಲೇಔಟ್ ನ ನಾಲ್ವರು ಮತ್ತು ಮೈಸೂರು ಹೊರವಲಯದ ಯರಗನಹಳ್ಳಿಯ ಒಬ್ಬರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಶನಿವಾರ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಘೋಷಣೆ ಮಾಡುತಿದ್ದಂತೆ ಇಲ್ಲಿನ ಜನರು ತಲ್ಲಣಗೊಂಡಿದ್ದಾರೆ.
ಲಾಕ್ ಡೌನ್ ಇದ್ದರೂ ರಸ್ತೆಯಲ್ಲಿ ನಿರ್ಭಯವಾಗಿ ಓಡಾಡುತಿದ್ದ ಜನರಿಗೀಗ ಭಯ ಶುರುವಾಗಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಬೇಕಾಬಿಟ್ಟಿ ಓಡಾಡುತಿದ್ದ ಜನರ ಸಂಖ್ಯೆ ಕಡಿಮೆಯಾಗಿದೆ.
ರೆಡ್ ಅಲರ್ಟ್ ಘೋಷಣೆಯಾಗುತಿದ್ದಂತೆ ಮತ್ತಷ್ಟು ಬಿಗಿಗೊಂಡ ಪೊಲೀಸರು ನಂಜನಗೂಡಿನ ಒಳಗೆ ಯಾರು ಬರದಂತೆ ಮತ್ತು ಇಲ್ಲಿಂದ ಹೊರಗೆ ಯಾರೂ ಹೋಗದಂತೆ ನಾಕಾ ಬಂದಿ ರಚಿಸಿ ಕಟ್ಟೆಚ್ಚರ ವಹಿಸಿದ್ದಾರೆ.
Next Story





