ಉಡುಪಿ ಜಿಲ್ಲಾಡಳಿತದ ಬಿಗಿ ಕ್ರಮ: ಜಿಲ್ಲೆ ಸಂಪೂರ್ಣ ಸ್ತಬ್ಧ
ಕೊರೋನ ವೈರಸ್ ಭೀತಿ

ಉಡುಪಿ, ಮಾ.29: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಸಾಕಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಇಂದು ಇಡೀ ಜಿಲ್ಲೆ ಮಧ್ಯಾಹ್ನ ನಂತರ ಸಂಪೂರ್ಣ ಸ್ತಬ್ಧಗೊಂಡಿತ್ತು.
ಇಂದಿನಿಂದ ಜಿಲ್ಲೆಯಲ್ಲಿ ಅವಶ್ಯಕ ಸಾಮಾಗ್ರಿಗಳನ್ನು ಬೆಳಗ್ಗೆ ಏಳರಿಂದ ಪೂರ್ವಾಹ್ನ 11 ಗಂಟೆಯವರೆಗೆ ಖರೀದಿಸಲು ಸಮಯ ನಿಗದಿ ಪಡಿಸಿರು ವುದ ರಿಂದ ಜನರು ತರಕಾರಿ ಹಾಗೂ ದಿನಸಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ವನ್ನು ಕಾಯ್ದುಕೊಂಡು ಸಾಮಾಗ್ರಿಗಳ್ನು ಖರೀದಿಸಿರುವುದು ಕಂಡುಬಂತು.
ಪೂರ್ವಾಹ್ನ 11ರ ಬಳಿಕ ಉಡುಪಿ ನಗರ ಸಂಪೂರ್ಣ ಹಾಗೂ ಜಿಲ್ಲೆಯ ಬಹುತೇಕ ದಿನಸಿ ಮತ್ತು ತರಕಾರಿ ಅಂಗಡಿಗಳು ಬಂದ್ ಮಾಡಿ ವ್ಯಾಪಾರ ವನ್ನು ಸ್ಥಗಿತಗೊಳಿಸಿದವು. ಇದರಿಂದ ಮಧ್ಯಾಹ್ನ ಬಳಿಕ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೆರಣಿಕೆಯ ವಾಹನ ವುತ್ತು ಜನ ಸಂಚಾರ ಕಂಡುಬಂತು.
ಆದರೆ ಮೆಡಿಕಲ್ ಶಾಪ್, ಆಸ್ಪತ್ರೆಗಳು ಮತ್ತು ಪೆಟ್ರೋಲ್ ಬಂಕ್‌ಗಳು ಸಂಜೆಯವರೆಗೂ ತೆರೆದಿದ್ದವು. ರವಿವಾರ ಆಗಿರುವುದರಿಂದ ಹೆಚ್ಚಿನ ಮೆಡಿಕಲ್ ಶಾಪ್‌ಗಳು ಕೂಡ ಬೆಳಗ್ಗೆಯಿಂದಲೇ ಬಂದ್ ಮಾಡಿದ್ದವು. ಜಿಲ್ಲಾಡಳಿತದ ಆದೇಶವನ್ನು ಕಟ್ಟುನಿಟ್ಟಿನಲ್ಲಿ ಜಾರಿಗೆ ತರುವುದಕ್ಕಾಗಿ ಪೊಲೀಸರು ನಗರ ಸೇರಿ ದಂತೆ ಜಿಲ್ಲೆಯಾದ್ಯಂತ ಗಸ್ತು ತಿರುಗಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಗಡಿ ಭಾಗವಾಗಿರುವ ಹೆಜಮಾಡಿ ಹಾಗೂ ಶಿರೂರು ಚೆಕ್‌ಪೋಸ್ಟ್ ನಲ್ಲಿ ತಪಾಸಣೆ ಹಾಗೂ ಭ್ರತೆಯನ್ನು ಮುಂದುವರೆಸಲಾಗಿದೆ.








