ಕಾಪು, ಮಾ. 29: ವಿಪರೀತ ಕುಡಿತದ ಚಟ ಹೊಂದಿದ್ದ ಕಾಪು ರಾಮನಗರ ನಿವಾಸಿ ಶಶಿಧರ ಸುವರ್ಣ (46) ಎಂಬವರು ಇತ್ತೀಚೆಗೆ ಮದ್ಯ ದೊರೆಯದ ಕಾರಣ ಖಿನ್ನತೆಗೆ ಒಳಗಾಗಿ ಮಾ.28ರಂದು ಸಂಜೆ ವೇಳೆ ಮನೆಯ ಮಾಡಿನ ಉಪ್ಪರಿಗೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.