ಅಮಾಸೆಬೈಲು, ಮಾ. 29: ದನಕ್ಕೆ ಹುಲ್ಲು ತರಲು ತೋಟಕ್ಕೆ ಹೋಗಿದ್ದ ರಟ್ಟಾಡಿ ಗ್ರಾಮದ ಅಜ್ಜರಕಲ್ಲು ನಿವಾಸಿ ಹರಿಪ್ರಸಾದ್ (55) ಎಂಬವರು ಮಾ.28ರಂದು ಸಂಜೆ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದು, ಇವರ ಮೃತದೇಹ ಮಾ.29ರಂದು ಬೆಳಗ್ಗೆ ಪತ್ತೆಯಾಗಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.