ಉಡುಪಿ: ಸೌಹಾರ್ದ ಸಹಕಾರಿಯಿಂದ ಸಾಲ ಮರುಪಾವತಿ ಮುಂದೂಡಿಕೆ
ಉಡುಪಿ, ಮಾ.29: ಆರ್.ಬಿ.ಐ. ನಿರ್ದೇಶನದಂತೆ ಸೌಹಾರ್ದ ಸಹಕಾರಿ ಗಳು ತಮ್ಮ ಸದಸ್ಯರಿಗೆ ನೀಡಿರುವ ಸಾಲದ ಮೂರು ತಿಂಗಳ ಮರುಪಾವತಿಯ ಮತ್ತು ಅದರ ಮೇಲಿನ ಬಡ್ಡಿಯನ್ನು ಸೇರಿ 3 ತಿಂಗಳ ಕಾಲ ಮುಂದೂಡಬೇಕು ಎಂದು ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟವು ತಿಳಿಸಿದೆ.
ಈ ಕಾರಣದಿಂದಾಗಿ ತಮ್ಮ ಸದಸ್ಯರಿಗೆ ಸ್ವಲ್ಪ ಭಾಗದ ಅನುಕೂಲವಾಗಲಿದೆ. ಹಾಗೆಯೇ ಕರೋನಾದಿಂದ ಪರೋಕ್ಷವಾಗಿ ಸಂತ್ರಸ್ತ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಅಗತ್ಯ ಯೋಜನೆಗಳನ್ನು ರೂಪಿಸಿ ವಿವಿಧ ರೀತಿಯ ಸಹಕಾರ, ಸಹಾಯ ನೀಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ ಎಸ್.ಕೆ. ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
Next Story





