ಮಂಗಳೂರು: ಮಸೀದಿಗಳಲ್ಲಿ ಪ್ರತೀ ದಿನ ನಾಲ್ಕು ಬಾರಿ ಸಂದೇಶ ಬಿತ್ತರಿಸಲು ಸೂಚನೆ
ಮಂಗಳೂರು, ಮಾ. 29: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ಮತ್ತು ಅಮೀರ್ ಎ ಷರಿಯತ್‌ನ ನಿರ್ದೇಶನದಂತೆ ಕನ್ನಡ, ಉರ್ದು, ಇಂಗ್ಲಿಷ್ ಹೀಗೆ ಮೂರು ಭಾಷೆಗಳಲ್ಲಿ ರಚಿಸಲಾದ ಆಡಿಯೋ ಸಂದೇಶವನ್ನು ರಾಜ್ಯ ವಕ್ಫ್ ಮಂಡಳಿಯು ಬಿಡುಗಡೆ ಮಾಡಿದೆ. ಈ ಆಡಿಯೋವನ್ನು ಎಲ್ಲಾ ಮಸೀದಿಗಳ ಧ್ವನಿವರ್ಧಕಗಳಲ್ಲಿ ದಿನಕ್ಕೆ ನಾಲ್ಕು ಬಾರಿ ಪ್ರಕಟಿಸಲು ಮಸೀದಿಗಳ ಆಡಳಿತ ಸಮಿತಿಗೆ ವಕ್ಫ್ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಸೂಚಿಸಿದ್ದಾರೆ.
ಪ್ರತೀ ದಿನ ಮುಸ್ಸಂಜೆ 6ಕ್ಕೆ ಬೆಳಗ್ಗೆ 10ಕ್ಕೆ, ಸಂಜೆ 4ಕ್ಕೆ, ರಾತ್ರಿ 8 ಗಂಟೆಗೆ ಈ ಆಡಿಯೋ ಕ್ಲಿಪ್ಪನ್ನು ಧ್ವನಿವರ್ಧಕಗಳಲ್ಲಿ ಪ್ರಸಾರ ಮಾಡಲು ಮನವಿ ಮಾಡಿದ್ದಾರೆ.
ದ.ಕ.ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯು ಕನ್ನಡ, ಬ್ಯಾರಿ, ಮಲಯಾಳಂ ಭಾಷೆಯಲ್ಲೂ ಈ ಬಗ್ಗೆ ಆಡಿಯೋ ಕ್ಲಿಪ್‌ನ್ನು ರಚಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Next Story





