ಭಟ್ಕಳದ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು 24X7 ಸಹಾಯವಾಣಿ: ಸಹಾಯಕ ಆಯುಕ್ತ
ಮನೆಬಾಗಿಲಿಗೆ ವೈದ್ಯರ ಸೇವೆ

ಭಟ್ಕಳ: ಕೊರೋನ ವೈರಸ್ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಜನರ ಸಮಸ್ಯೆಗಳಿಗೆ ಸ್ಪಂಧಿಸಲು ದಿನದ 24 ಗಂಟೆಯೂ ಸಹಾಯವಾಣಿ ಸಿದ್ಧವಿದ್ದು 08385226422ಕರೆ ಮಾಡುವುದರ ಮೂಲಕ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಭರತ್ ಎಸ್ ಸೋಮವಾರ ಹೇಳಿದರು.
ಅವರು ಸಹಾಯಕ ಆಯುಕ್ತರ ಕಾರ್ಯಾಲಯದಲ್ಲಿ ಸುದ್ದಿಗೊಷ್ಟಿಯನ್ನುದ್ದೇಶಿಸಿ ಮಾತನಾಡಿದರು. ತಾಲೂಕು ಸಹಾಯವಾಣಿಯಲ್ಲಿ ನಾಲ್ಕ ಜನರು ನೇಮಕಗೊಂಡಿದ್ದು ಎಲ್ಲ ರೀತಿಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳ ನೇಮಕಗೊಂಡಿದ್ದು ತರಕಾರಿ, ಹಾಲು, ಕಿರಾಣಿ, ದನಕರುಗಳಿಗೆ ಮೇವು, ಔಷಧಿ ವಲಸೆ ಕಾರ್ಮಿಕರು ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳು ನೇಮಕಗೊಂಡಿದ್ದು ಮೇಲಿನ ಸಹಾಯವಾಣಿಗೆ ಕರೆ ಮಾಡಿದರೆ ಅವರು ನಿಮ್ಮ ಸಮಸ್ಯೆಗಳನ್ನು ಬರೆದುಕೊಂಡು ಸಂಬಂಧಿಸಿದ ನೋಡೆಲ್ ಅಧಿಕಾರಿಗಳಿಗೆ ತಿಳಿಸಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡಲಾಗುವುದು ಎಂದರು.
ಮನೆಬಾಗಿಲಿಗೆ ಚಿಕಿತ್ಸೆಗೆ: ಕೊರೋನ ವೈರಸ್ ಸೋಂಕು ಹರಡುತ್ತದೆ ಎನ್ನುವ ಆತಂಕದಲ್ಲಿರುವ ಭಟ್ಕಳದಲ್ಲಿ ಮನೆ ಬಾಗಿಲಿಗೆ ವೈದ್ಯರನ್ನ ಕಳಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈಗಾಗಲೇ ಭಟ್ಕಳದಲ್ಲಿ ಏಳು ಜನರಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಹೆಲ್ತ್ ಎಮರ್ಜೆನ್ಸಿ ಹಾಗೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮನೆಯಿಂದ ಯಾರೂ ಹೊರಬರದಂತೆ ಸೂಚನೆ ನೀಡಿದ್ದರು ಅನಾರೋಗ್ಯ ಕಾರಣ ಹೇಳಿ, ಔಷದಿ ತೆಗೆದುಕೊಳ್ಳಬೇಕು ಎನ್ನುವ ಕಾರಣ ನೀಡಿ ಮನೆಯಿಂದ ಕೆಲವರು ಒಡಾಟ ಮಾಡುತ್ತಿದ್ದರು. ಸೋಂಕು ಹರಡುವ ಸೂಕ್ಷ್ಮ ಪ್ರದೇಶ ಆಗಿರುವ ಹಿನ್ನೆಲೆಯಲ್ಲಿ ಜನರು ಯಾರು ಕೂಡ ಮನೆಯಿಂದ ಹೊರಬರಬಾರದು ಎನ್ನುವ ಉದ್ದೇಶದಿಂದ ಮನೆಯಲ್ಲಿ ಕುಳಿತು ಸಹಾಯವಾಣಿ 08385226422ಕರೆ ಮಾಡಿದ್ದಲ್ಲಿ ವೈದ್ಯರು ನಿಮ್ಮ ಮನೆಬಾಗಿಲಿಗೆ ಬಂದು ಚಿಕಿತ್ಸೆ ನೀಡುತ್ತಾರೆ. ಅದಕ್ಕಾಗಿ ಪ್ರತಿಯೊಂದು ದಿನ ಒಬ್ಬರಂತೆ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ ಅವರು ಬಂದು ನಿಮಗೆ ಉಚಿತ ಸೇವೆಯನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಡಾ.ಸೈಯ್ಯದ್ ಅಬ್ದುಲ್ ಕಾದರ್ 7022859538, ಡಾ.ಬಾಲಕೃಷ್ಣ ಲೈಫ್ ಕೇರ್ ಆಸ್ಪತ್ರೆ 9108881160, ಡಾ. ಯಸೀನ್ ಮೊಹತೆಶಮ್ ಕಿಟ್ ಕ್ಯಾಟ್ ಕ್ಲಿನಿಕ್ 9449581195, ಡಾ.ನಸೀಮ್ ಖಾನ್ ಶಿರಾಲಿ 9916880146, ಮುಹಮ್ಮದ್ ಸಮಿಯುಲ್ಲಾ ನಿಶಾತ್ ನರ್ಸಿಂಗ್ 9663107039, ಡಾ.ಗಣೇಶ್ ಪ್ರಭು ರಾಜ್ ಕ್ಲಿನಿಕ್ 9343391811, ಡಾ.ರಾಜೇಂದ್ರ ಆರ್.ಎನ್.ಎಸ್ ಆಸ್ಪತ್ರೆ 9676538522 ಇವರು ಮಾ.30 ರಿಂದ ಎಪ್ರಿಲ್ 6 ರ ವರೆಗೆ ಸೇವೆಗೆ ಲಭ್ಯವಿರುತ್ತಾರೆ ಸಾರ್ವಜನಿಕರು ತುರ್ತು ಪರಿಸ್ಥಿತಿಯಲ್ಲಿ ಇವರ ಸೇವೆಯನ್ನು ಪಡೆದುಕೊಳ್ಳ ಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.







