ಮಲ್ನಾಡ್ ಗಲ್ಫ್ ಅಸೋಸಿಯೇಶನ್ ವತಿಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ಮಾಸ್ಕ್, ಪಿಪಿಇ ಕಿಟ್ ವಿತರಣೆ

ಜಯಪುರ/ ಬಾಳೆಹೊನ್ನೂರು/ಕೊಪ್ಪ : ಕೊರೋನ ಸೋಂಕಿತರನ್ನು ಉಪಚರಿಸುವ ವೇಳೆ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗಾಗಿ ಅಳವಡಿಸಿ ಕೊಳ್ಳಬೇಕಾದ ಮುಂಜಾಗ್ರತಾ ಸಲಕರಣೆಗಳ ಕೊರತೆ ಇರುವುದನ್ನು ಅರಿತ ಮಲ್ನಾಡ್ ಗಲ್ಫ್ ಅಸೋಸಿಯೇಶನ್ ಸಂಘಟನೆ ಜಯಪುರ, ಬಾಳೆಹೊನ್ನೂರು, ಮಾಗುಂಡಿ, ನಿಡುವಾಳೆ, ಸುಂಕಸಾಲೆ, ಜಾವಳೆಯಲ್ಲಿರುವ ಸರಕಾರಿ ಆರೋಗ್ಯ ಕೇಂದ್ರಗಳಿಗೆ 1 ಸಾವಿರ ಮಾಸ್ಕ್, 50 ಪಿಪಿಇ ಕಿಟ್‍ಗಳನ್ನು ವಿತರಿಸಿತು.
ಸಮಾಜ ಸೇವಕರಾದ ಝಮೀರ್ ಮೂಸಬ್ಬ ಮತ್ತು ಪಂಚಾಯತ್ ಸದಸ್ಯರಾದ ಇಬ್ರಾಹಿಂ ಶಾಫಿ ಅವರು ಸೌದಿ ಅರೇಬಿಯಾದಲ್ಲಿರುವ ಮಲೆನಾಡಿನ ಅನಿವಾಸಿ ಭಾರತೀಯರು ಸೇರಿ ಸ್ಥಾಪಿಸಿರುವ ಪ್ರತಿಷ್ಠಿತ ಮಲ್ನಾಡ್ ಗಲ್ಫ್ ಅಸೋಸಿಯೇಶನ್ ಸಂಘಟನೆಯ ಪದಾಧಿಕಾರಿಗಳಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಸಹಾಯ ಮಾಡಲು ಕೇಳಿಕೊಂಡಾಗ ಸಂಘಟನೆಯ ಪದಾಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿ ಪಿಪಿಇ ಕಿಟ್ ತುರ್ತಾಗಿ ಅವಶ್ಯಕತೆ ಇರುವ ಸರ್ಕಾರಿ ಆಸ್ಪತ್ರೆಗಳನ್ನು ಗುರುತಿಸಿ 1000 ಮಾಸ್ಕ್‌ಗಳನ್ನೊಳಗೊಂಡಂತೆ 50 ಪಿಪಿಇ ಕಿಟ್‍ಗಳನ್ನು ವಿತರಿಸಿ, ಕೊಪ್ಪದ ಸರಕಾರಿ ಆಸ್ಪತ್ರೆಗೆ ಇನ್ನೆರಡು ದಿನಗಲ್ಲಿ ತಲುಪಿಸುವ ವ್ಯವಸ್ಥೆ ಮಾಡಿದರು.
ಜಯಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ಆರೋಗ್ಯಾಧಿಕಾರಿ ಡಾ. ಸುಧೀಂದ್ರ ಅವರಿಗೆ ಬದ್ರಿಯಾ ಜಮಾಅತ್ ಅಧ್ಯಕ್ಷ ಹಾಜಿ ಅಬುಲ್ ಕಲಾಂ, ಉಪಾಧ್ಯಕ್ಷ ಹಾಜಿ ಅಬ್ದುಲ್ ಅಝೀಝ್ ಕಿಟ್ ಗಳನ್ನು ಹಸ್ತಾಂತರಿಸಿದರು. ಮೌಲಾನಾ ಕೆ ಎಂ ಅಬೂಬಕರ್ ಸಿದ್ದೀಖ್, ಜಯಪುರ ಪೊಲೀಸ್ ಠಾಣಾಧಿಕಾರಿ ಸತೀಶ್, ಪ್ರಮುಖರಾದ ಹಾಜಿ ಅಬೂಬಕರ್, ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.
ಬಾಳೆಹೊನ್ನೂರು ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಹೂವಮ್ಮ, ಪಂಚಾಯತ್ ಸದಸ್ಯರಾದ ಇಬ್ರಾಹಿಂ ಶಾಫಿ , ರಫೀಕ್ ಎಸ್.ಕೆ, ಆರಿಫ್ ಅವರು ಆರೋಗ್ಯಾಧಿಕಾರಿ ಡಾ. ಪ್ರವೀಣ್ ಅವರಿಗೂ, ಇಬ್ರಾಹಿಂ ಶಾಫಿ ಅವರು ಬಾಳೆಹೊನ್ನೂರು ಪೊಲೀಸ್ ಠಾಣಾಧಿಕಾರಿಗೆ ಮಾಸ್ಕ್ ಹಾಗು ಕಿಟ್ ಗಳನ್ನು ಹಸ್ತಾಂತರಿಸಿದರು.
ಮಾಗುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಎಂ.ಜಿ.ಎ. ಮುಖಂಡರಾದ ಅಬ್ದುಲ್ ವಾಹಿದ್, ನಿಡುವಾಳೆ ಮತ್ತು ಜಾವಳಿಯಲ್ಲಿ ಎಂ.ಜಿ.ಎ ಯುವ ಮುಖಂಡ ಮುಹಮ್ಮದ್ ರಝಿನ್ ಸಂಬಂಧಪಟ್ಟ ಆರೋಗ್ಯಾಧಿಕಾರಿಗಳಿಗೆ ನೀಡಿದರು. ಕೊಪ್ಪದ ಸರಕಾರಿ ಆಸ್ಪತ್ರೆಗೆ ಕುವೈತ್ ಘಟಕದ ಮುಖಂಡ ಅಬ್ದುಲ್ ರಹ್ಮಾನ್ ವಿತರಿಸಲಿರುವರು.
ವಿದೇಶದಲ್ಲಿ ದುಡಿಯುತ್ತಿರುವ ಮಲೆನಾಡಿಗರ ನೇತೃತ್ವದಲ್ಲಿ ಸಮಾಜ ಸೇವೆಯ ಉದ್ದೇಶದಿಂದ ಸ್ಥಾಪಿತವಾದ ಮಲ್ನಾಡ್ ಗಲ್ಫ್ ಅಸೋಸಿಯೇಶನ್ (ಎಂಜಿಎ) ಇದೀಗ ಕುವೈತ್ ಮತ್ತು ಇನ್ನಿತರ ಹಲವು ರಾಷ್ಟ್ರಗಳಲ್ಲಿ ತನ್ನ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ. ಈ ಹಿಂದೆಯೂ ರಕ್ತದಾನ ಶಿಬಿರ, ಬಡ ಯುವತಿಯರ ವಿವಾಹ, ನೆರೆ ಸಂತ್ರಸ್ತರಿಗೆ ಪರಿಹಾರ ಹೀಗೆ ಹಲವಾರು ಕಾರ್ಯಗಳನ್ನು ಮಾಡುತ್ತಲೇ ಬಂದಿರುತ್ತಾರೆ ಎಂದು ಎಂಜಿಎ ಕೇಂದ್ರ ಸಮಿತಿಯ ಅಧ್ಯಕ್ಷ ಶರೀಫ್ ಕಳಸ ತಿಳಿಸಿದ್ದಾರೆ.






.jpeg)
.jpeg)
.jpeg)
.jpeg)
.jpeg)
.jpeg)






