ಲಾಕ್‍ಡೌನ್ ಪರಿಣಾಮ: ಊಟಕ್ಕಾಗಿ ಪರದಾಡಿದ ವಿದೇಶಿಗರು!
ಬೆಂಗಳೂರು, ಮಾ.30: ಕೊರೋನ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ನಿರ್ಗತಿಕರು, ಕೂಲಿ ಕಾರ್ಮಿಕರು, ಬಡವರು ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಯಿತು. ಇವರ ಸಾಲಿಗೆ ಈಗ ವಿದೇಶಿಗರೂ ಸೇರಿಕೊಂಡಿದ್ದು, ಊಟಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಅವರಿಗೂ ಬಂದೊದಗಿದೆ.
ಭಾರತಕ್ಕೆ ಪ್ರವಾಸ ಹಾಗೂ ಇನ್ನಿತರೆ ಕೆಲಸಕ್ಕಾಗಿ ಬಂದಿರುವ ವಿದೇಶಿಯರಿಗೆ ಒಂದೆಡೆ ಸ್ವದೇಶಕ್ಕೆ ತೆರಳಲು ವಿಮಾನಗಳಿಲ್ಲದೆ, ಮತ್ತೊಂದೆಡೆ ತಂಗಿರುವ ಹೊಟೇಲ್‍ಗಳಲ್ಲಿ ಸರಿಯಾದ ವ್ಯವಸ್ಥೆಯೂ ಇಲ್ಲದೆ ನಮ್ಮ ಪರಿಸ್ಥಿತಿ ಯಾರಿಗೂ ಬರಬಾರದು ಎನ್ನುತ್ತಿದ್ದಾರೆ.
ಸದ್ಯಕ್ಕೆ ಎ.14ರವರೆಗೆ ಭಾರತ ಲಾಕ್ ಡೌನ್ ಆಗಿದ್ದು, ಯಾವುದೇ ವಿಮಾನಗಳ ಹಾರಾಟವಿಲ್ಲದಿರುವುದರಿಂದ ವಿದೇಶಿಯರು ಇಲ್ಲೇ ಉಳಿಯುವಂತೆ ಆಗಿದೆ. ಈ ಲಾಕ್ ಡೌನ್ ತೆರವಿಗಾಗಿ ಕಾಯ್ದು ಕುಳಿಯುತ್ತಿದ್ದಾರೆ.
Next Story





