ಪಂಜಾಬ್ ನಲ್ಲಿ ಕರ್ಫ್ಯೂ ಎ.14ರ ತನಕ ವಿಸ್ತರಣೆ
ಚಂಡೀಗಡ, ಮಾ.31: ಕೊರೋನ ವೈರಸ್ ಸೋಂಕು ಹರಡುತ್ತಿರುವ ಕಾರಣದಿಂದಾಗಿ ಪಂಜಾಬ್ ನಲ್ಲಿ ವಿಧಿಸಲಾಗಿದ್ದ ರಾಜ್ಯವ್ಯಾಪಿ ಕರ್ಫ್ಯೂ ವನ್ನು ಎ.14ರ ತನಕ ವಿಸ್ತರಿಸಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ರಾಜ್ಯದ ಗಡಿಗಳನ್ನು ಮುಚ್ಚಲು ನಿರ್ದೇಶಿಸಿದ್ದಾರೆ. ಕೋವಿಡ್ -19 ವಿರುದ್ಧ ಹೋರಾಟದಲ್ಲಿ ತೊಡಗಿರುವ ಪಂಜಾಬ್ ಪೊಲೀಸ್ ಸಿಬ್ಬಂದಿ ಮತ್ತು ನೈರ್ಮಲ್ಯ ಕಾರ್ಮಿಕರಿಗೆ ವಿಶೇಷ ವಿಮೆಯ ಭರವಸೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೊರೋನ ವೈರಸ್ ವಿರುದ್ಧದ ಯುದ್ಧದಲ್ಲಿ ಬಿಕ್ಕಟ್ಟನ್ನು ನಿವಾರಿಸಲು ಮತ್ತು ವೈದ್ಯಕೀಯ ವಸ್ತುಗಳು ಮತ್ತು ಅಗತ್ಯ ವಸ್ತುಗಳ ನಿರಂತರ ಸರಬರಾಜನ್ನು ದೃಢಪಡಿಸಿಕೊಳ್ಳಲು ತುರ್ತು ಹಣಕಾಸು ಯೋಜನೆಯನ್ನು ರೂಪಿಸಲು ಹಣಕಾಸು ಸಚಿವ ಮನ್‌ಪ್ರೀತ್ ಬಾದಲ್ ಅವರಿಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಲಹೆ ನೀಡಿದರು
Next Story