ಈಗ ಹುಳುಕು ಹುಡುಕುವ ಸಮಯವಲ್ಲ : ಕೇಂದ್ರ ಅರೋಗ್ಯ ಇಲಾಖೆ
ನಿಝಾಮುದ್ದೀನ್ ಮರ್ಕಝ್ ಕುರಿತ ವದಂತಿಗಳ ಬಗ್ಗೆ ಹೇಳಿಕೆ

ಲವ್ ಅಗರ್ವಾಲ್
ಹೊಸದಿಲ್ಲಿ, ಮಾ. 31: ದಿಲ್ಲಿಯ ನಿಝಾಮುದ್ದೀನ್ ನಲ್ಲಿ ಧಾರ್ಮಿಕ ಸಭೆಯೊಂದರ ಮೂಲಕ ಕೊರೋನ ಹರಡಿದೆ ಎಂಬ ವದಂತಿ ಹಾಗು ಸುದ್ದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಅರೋಗ್ಯ ಸಚಿವಾಲಯ " ಈಗ ಸೂಕ್ತ ಕ್ರಮ ಕೈಗೊಳ್ಳುವ ಸಮಯವೇ ಹೊರತು ಹುಳುಕು ಹುಡುಕುವ ಸಮಯವಲ್ಲ " ಎಂದು ಹೇಳಿದೆ.
" ಕೊರೊನ ನಿಯಂತ್ರಣಕ್ಕಾಗಿ ದಿಲ್ಲಿ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಈಗ ಯಾವುದೇ ಹುಳುಕು ಹುಡುಕುವ ಅಥವಾ ಅಂತಹ ಬೇರೆ ಯಾವುದೇ ಕೆಲಸ ಮಾಡುವ ಸಮಯವಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಎಲ್ಲಿ ವೈರಸ್ ಇರುವುದು ದೃಢವಾಗುತ್ತದೆ ಅಲ್ಲಿ ಅದನ್ನು ನಿಯಂತ್ರಿಸುವುದು ಈಗ ಬಹಳ ಮುಖ್ಯ" ಎಂದು ಅರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ.
Next Story