ಇಟಲಿ: ಇನ್ನೂ 812 ಸಾವು
ರೋಮ್ (ಇಟಲಿ), ಮಾ. 31: ಇಟಲಿಯಲ್ಲಿ ಕೊರೋನವೈರಸ್ನಿಂದಾಗಿ ಸೋಮವಾರ ಹೊಸದಾಗಿ 812 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಆ ದೇಶದಲ್ಲಿ ಈವರೆಗೆ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ 11,591ಕ್ಕೆ ಏರಿದೆ.
ಸೋಮವಾರ 4,050 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.
ಮೃತರ ಗೌರವಾರ್ಥ ನಿಮಿಷದ ಮೌನಾಚರಣೆ
ಕೊರೋನವೈರಸ್ಗೆ ಬಲಿಯಾದವರ ಗೌರವಾರ್ಥ ಇಟಲಿಯಲ್ಲಿ ಮಂಗಳವಾರ ಒಂದು ನಿಮಿಷದ ವೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇಶಾದ್ಯಂತ ರಾಷ್ಟ್ರಧ್ವಜಗಳು ಅರ್ಧ ಮಟ್ಟದಲ್ಲಿ ಹಾರಾಡಿದವು.
ಕೊರೋನವೈರಸ್ನಿಂದಾಗಿ ಜಗತ್ತಿನಲ್ಲಿ ಸಂಭವಿಸಿದ ಸಾವುಗಳ ಪೈಕಿ ಸುಮಾರು ಮೂರನೇ ಒಂದು ಸುಮಾರು 6 ಕೋಟಿ ಜನಸಂಖ್ಯೆಯ ಇಟಲಿಯೊಂದರಲ್ಲೇ ಸಂಭವಿಸಿದೆ.
Next Story