Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಕಟದ ಕಾಲದಲ್ಲಿ ಸರಕಾರದ ನಡೆ...

ಸಂಕಟದ ಕಾಲದಲ್ಲಿ ಸರಕಾರದ ನಡೆ ಪಾರದರ್ಶಕವಾಗಿರಲಿ

ವಾರ್ತಾಭಾರತಿವಾರ್ತಾಭಾರತಿ31 March 2020 11:37 PM IST
share

ಹಿಂದೆಂದೂ ಕಂಡರಿಯದ ಕೊರೋನದಂಥ ಪಿಡುಗಿನಿಂದ ಇಡೀ ಭಾರತ ತತ್ತರಿಸಿ ಹೋಗಿದೆ. ಈ ಗಂಡಾಂತರದಿಂದ ದೇಶವನ್ನು ಪಾರು ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೆಣಗಾಡುತ್ತಿವೆ. ಸರಕಾರಗಳ ನಡೆಯ ಬಗ್ಗೆ ಅನುಮಾನವಿಲ್ಲ. ಆದರೆ ಆರಂಭದಿಂದಲೂ ಕೇಂದ್ರ ಸರಕಾರ ನಡೆದುಕೊಂಡ ರೀತಿಯ ಬಗ್ಗೆ ಕೆಲ ಪ್ರಶ್ನೆಗಳಿವೆ. ಈ ಪ್ರಶ್ನೆಗಳು ಪ್ರಶ್ನೆಗಳಾಗಿ ಉಳಿಯಬಾರದು. ಸರಕಾರ ತಕ್ಷಣ ಗೊಂದಲ ನಿವಾರಿಸಲು ಮುಂದಾಗಬೇಕು.

ಜನವರಿ 29ರಂದು ಮೊದಲ ಕೊರೋನ ಕೇಸ್ ಪತ್ತೆಯಾದ ನಂತರ ಸರಕಾರ ಎಚ್ಚೆತ್ತುಕೊಂಡಿದ್ದರೆ ದೇಶದ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ. ಆಗ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಆಮಂತ್ರಿಸಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಿದ ಬಗ್ಗೆ ಈಗಲೂ ಟೀಕೆಗಳು ಕೇಳಿ ಬರುತ್ತಿವೆ. ಹೋಗಲಿ ಆ ನಂತರವಾದರೂ ಸರಕಾರ ತನ್ನ ಲೋಪವನ್ನು ತಿದ್ದಿಕೊಂಡು ಸರಿಯಾದ ಹೆಜ್ಜೆಯನ್ನು ಇರಿಸಿತಾ? ಪ್ರಧಾನಿ ಅವರೇನೋ ಮಾರ್ಚ್ 21ರಂದು ಇಂದು ರಾತ್ರಿಯಿಂದ ಇಡೀ ಭಾರತ ಲಾಕ್‌ಡೌನ್ ಎಂದು ತರಾತುರಿಯಲ್ಲಿ ಘೋಷಣೆ ಮಾಡಿದ್ದನ್ನು ಬಿಟ್ಟರೆ ಅದಕ್ಕೆ ಪೂರಕವಾಗಿ ಯಾವುದೇ ಕಾರ್ಯಕ್ರಮವನ್ನು ರೂಪಿಸಲಿಲ್ಲ. ಪ್ರಧಾನಿಯ ದಿಢೀರ್‌ಘೋಷಣೆ ಬಡವರ, ಮಧ್ಯಮ ವರ್ಗದವರ ಅದರಲ್ಲೂ ವಿಶೇಷವಾಗಿ ವಲಸೆ ಕಾರ್ಮಿಕರ ಬದುಕಿನ ಅಡಿಪಾಯವನ್ನೇ ಅಲುಗಾಡಿಸಿತು.

ನಮ್ಮ ಆಧುನಿಕ ಭಾರತದ ಮಹಾನಗರಗಳನ್ನು ಕಟ್ಟಿದ, ಸಣ್ಣಪುಟ್ಟ ನಗರಗಳ ನಿರ್ಮಾಣದಲ್ಲಿ ಬೆವರು ಮತ್ತು ರಕ್ತ ಬಸಿದ ವಲಸೆ ಕಾರ್ಮಿಕರ ಬದುಕು ಈಗ ಮತ್ತಷ್ಟು ಮೂರಾಬಟ್ಟೆಯಾಗಿದೆ. ಇಡೀ ನಗರಗಳು ಬೀಗ ಜಡಿದುಕೊಂಡು ಕೂತಿದ್ದರಿಂದ ದುಡಿಮೆಯಿಲ್ಲದ, ಅನ್ನವಿಲ್ಲದ ಈ ಜನ ನಗರಗಳಿಂದ ಹೊರದಬ್ಬಲ್ಪಟ್ಟು ಮತ್ತೆ ತಮ್ಮ ಊರುಗಳಿಗೆ ಬರಿಗಾಲಲ್ಲಿ ಉರಿವ ಬಿಸಿಲಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಇವರು ಒಬ್ಬರು ಇಬ್ಬರಲ್ಲ, ಒಂದೇ ಊರಿನಿಂದಲ್ಲ, ದೇಶದ ಮೂಲೆ ಮೂಲೆಗಳಿಂದ ಹೆಗಲಲ್ಲಿ, ಬಗಲಲ್ಲಿ ಮಕ್ಕಳನ್ನು ಹೊತ್ತುಕೊಂಡು ಗಂಟುಮೂಟೆಗಳನ್ನು ತಲೆಯ ಮೇಲೆ ಹೇರಿಕೊಂಡು ಮಹಾಯಾನ ಆರಂಭಿಸಿದ್ದಾರೆ, ತಮ್ಮ ಊರು ನೂರು ಕಿಮೀ ಇರಲಿ, ಐದು ನೂರು ಕಿಮೀ ಇರಲಿ, ಸಾವಿರ ಕಿಮೀ ಇರಲಿ ನಡೆದು ಹೋಗುವುದನ್ನು ಬಿಟ್ಟರೆ ಇವರಿಗೆ ಬೇರೆ ದಾರಿಯಿಲ್ಲ. ಲಾಕ್‌ಡೌನ್ ಘೋಷಣೆ ಮಾಡುವವರಿಗೆ ಇದು ಅರ್ಥವಾಗುವುದಿಲ್ಲ.

ವಾಹನ ಸಂಚಾರ ಸಂಪೂರ್ಣ ಬಂದ್ ಆಗಿರುವುದರಿಂದ ಉದ್ಯೋಗ ಬಯಸಿ ಮಹಾನಗರಗಳಿಗೆ ಬಂದಿದ್ದ ಈ ಸಾವಿರಾರು ಕಾರ್ಮಿಕರು ಒಟ್ಟೊಟ್ಟಿಗೆ ನಡೆದುಕೊಂಡು ಹೊರಟಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆತಂಕ ಉಂಟಾಗಿದೆ. ದಿಗ್ಬಂಧನ ಘೋಷಿಸಿದ ನಂತರ ತಾವಿರುವ ನಗರಗಳಲ್ಲಿ ರೈಲು, ಬಸ್ ನಿಲ್ದಾಣದ ಬಳಿ ಬಂದು ವಾಹನ ಬಿಡಬಹುದೇನೊ ಎಂದು ಕಾಯ್ದು ನಿರಾಶರಾಗಿ ಇವರು ಹೊರಟಿದ್ದಾರೆ. ಎಲ್ಲ ರಾಜ್ಯಗಳ ಗಡಿಗಳನ್ನು ಬಂದ್ ಮಾಡಿರುವುದರಿಂದ ಈ ವಲಸೆ ಕಾರ್ಮಿಕರು ಗಡಿಯಲ್ಲಿ ತಂಗಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಒಡಿಶಾ, ದಿಲ್ಲಿಗಳಲ್ಲಿ ಈ ಸಮಸ್ಯೆ ಉಲ್ಬಣಿಸಿದೆ. ಇಂಥವರ ಬಗ್ಗೆ ಸರಕಾರ ಎಷ್ಟು ಅಮಾನುಷವಾಗಿ ನಡೆದುಕೊಳ್ಳುತ್ತಿದೆ ಅಂದರೆ ಉತ್ತರ ಪ್ರದೇಶದಲ್ಲಿ ಬೇರೆ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರ ಮೇಲೆ ಯೋಗಿ ಆದಿತ್ಯನಾಥ್ ಸರಕಾರ ಸೋಂಕು ನಿವಾರಕ ರಾಸಾಯನಿಕ ಸಿಂಪಡಿಸಿದೆ. ಇದರಿಂದ ಅನೇಕರು ಅಸ್ವಸ್ಥರಾಗಿದ್ದಾರೆ.

ಇಂಥ ವಲಸೆ ಕಾರ್ಮಿಕರು ವಲಸೆ ಹೋಗಲು ಅವಕಾಶ ಕೊಡದೆ ಅವರಿದ್ದ ನಗರಗಳಲ್ಲೇ ಊಟ ವಸತಿ ಸೌಕರ್ಯಗಳನ್ನು ಕಲ್ಪಿಸಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ. ಈ ಬಗ್ಗೆ ಸರಕಾರ ಕೈಗೊಂಡ ಕ್ರಮಗಳೇನು ಎಂಬುದನ್ನು ಬಹಿರಂಗಪಡಿಸಬೇಕು.
ವಲಸೆ ಕಾರ್ಮಿಕರ ಸಮಸ್ಯೆ ಮಾತ್ರವಲ್ಲ ಒಟ್ಟಾರೆ ಕೊರೋನ ವೈರಾಣು ಅನಾಹುತವನ್ನು ಎದುರಿಸಲು ಸರಕಾರ ಕೈಗೊಂಡ ನಿರ್ದಿಷ್ಟ ಕ್ರಮಗಳೇನು? ಕಾರ್ಮಿಕರಿಗೆ ಉದ್ಯೋಗವಿಲ್ಲ, ರೈತರ ಬೆಳೆ ಅನೇಕ ಕಡೆ ಹಾಳಾಗಿದೆ, ಅಸಂಘಟಿತ ವಲಯದ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.ಇವರಿಗಾಗಿ ಸರಕಾರದ ಪರಿಹಾರ ಯೋಜನೆಗಳೇನು? ಬಹಿರಂಗಪಡಿಸಲಿ.

ಕೇಂದ್ರ ಸರಕಾರದಿಂದ ವಿಶೇಷವಾಗಿ ಪ್ರಧಾನಿ ಅವರಿಂದ ಅಂಥ ಯಾವುದೇ ಖಚಿತ ಕಾರ್ಯಕ್ರಮ ಪ್ರಕಟವಾಗಿಲ್ಲ. ಅದರ ಬದಲಾಗಿ ಈಗಿರುವ ಪ್ರಧಾನಮಂತ್ರಿ ವಿಪತ್ತು ಪರಿಹಾರ ನಿಧಿ ಇದ್ದರೂ ಪಿಎಂ ಕೇರ್ ಎಂಬ ಇನ್ನೊಂದು ಟ್ರಸ್ಟ್ ಖಾತೆಯನ್ನು ಆರಂಭಿಸಿ ಅದಕ್ಕೆ ದೇಶದ ಎಲ್ಲ ಸಂಸದರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯ 1 ಕೋಟಿ ರೂ. ಜಮೆ ಮಾಡಲು ಹೇಳಿದ್ದು ವಿನಾಕಾರಣ ಸಂದೇಹಕ್ಕೆ ಕಾರಣವಾಗಿದೆ. ಇನ್ನು ಮುಂದಾದರೂ ಕೇಂದ್ರ ಸರಕಾರ ದೇಶದಲ್ಲಿ ಕೊರೋನ ಪರಿಸ್ಥಿತಿ ಹೇಗಿದೆ, ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು? ಎಂಬುದನ್ನು ರಾಷ್ಟ್ರದ ಜನರ ಎದುರು ಬಹಿರಂಗಪಡಿಸಲಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X