ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 1,637ಕ್ಕೆ ಏರಿಕೆ
ಹೊಸದಿಲ್ಲಿ, ಎ.1: ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ತೀವ್ರವಾಗಿ ಏರಿಕೆಯಾಗಿದ್ದು, ಪ್ರಕರಣಗಳ ಸಂಖ್ಯೆ 1,637 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ವೆಬ್ಸೈಟ್ ಇಂದು ಪ್ರಕಟಿಸಿದೆ.
ಒಂದೇ ದಿನದಲ್ಲಿ 240 ಪ್ರಕರಣಗಳು ಪತ್ತೆಯಾಗಿದೆ. ಇನ್ನೂ ಮೂರು ಸಾವುಗಳು ದೃಢ ಪಟ್ಟಿದ್ದರಿಂದ ಕೋವಿಡ್ -19 ಸಾವಿನ ಸಂಖ್ಯೆ 38ಕ್ಕೆ ಏರಿದೆ.
ಕೋಬ್ವಿಡ್ -19 ಹಾಟ್ಸ್ಪಾಟ್ ಎಂದು ಗುರುತಿಸಲಾಗಿರುವ ದಿಲ್ಲಿಯ ನಿಝಾಮುದ್ದೀನ್ನಲ್ಲಿ ನಡೆದ ತಬ್ಲೀ-ಎ-ಜಮಾಅತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೂವತ್ತು ಜನರನ್ನು ಪುಣೆಯಲ್ಲಿ ಕ್ಯಾರೆಂಟೈನ್ ನಲ್ಲಿ ಇರಿಸಲಾಗಿದೆ. ವೈದ್ಯರೊಬ್ಬರಿಗೆ ಕೊರೋನ ವೈರಸ್ ಪೊಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ದಿಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಬೀಗ ಜಡಿಯಲಾಗಿದೆ.
Next Story