ಮುಂಬೈಯಲ್ಲಿ 3 ದಿನಗಳ ಮಗುವಿಗೆ ಕೊರೋನವೈರಸ್ ದೃಢ
ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ: ತಂದೆಯ ಆರೋಪ
ಮುಂಬೈ: ಮೂರು ದಿನಗಳ ಮಗು ಮತ್ತು ಅದರ ತಾಯಿಗೆ ಕೊರೋನ ವೈರಸ್ ದೃಢಪಟ್ಟಿರುವ ಘಟನೆ ಮುಂಬೈಯಲ್ಲಿ ನಡೆದಿದ್ದು, ಮಗುವಿನ ತಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯವರಲ್ಲಿ ತನ್ನ ಕುಟುಂಬವನ್ನ ಉಳಿಸುವಂತೆ ಮನವಿ ಮಾಡಿದ್ದಾರೆ.
ಕಳೆದ ವಾರ ಇಲ್ಲಿನ ಚೆಂಬೂರ್ ನಿವಾಸಿ ವಿಕ್ಕಿ ಸಿಂಗ್ ತನ್ನ ಪತ್ನಿಯನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದು, ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಮಗು ಮತ್ತು ತಾಯಿ ಆರಂಭದಲ್ಲಿ ಪ್ರತ್ಯೇಕ ಕೋಣೆಯಲ್ಲಿದ್ದರು. ಇದೇ ಕೋಣೆಗೆ ಮತ್ತೊಬ್ಬ ರೋಗಿಯನ್ನು ಆಸ್ಪತ್ರೆಯವರು ದಾಖಲಿಸಿದ್ದು, ಆ ವ್ಯಕ್ತಿ ಕೊರೋನ ಪಾಸಿಟಿವ್ ಎಂದು ಮಾಹಿತಿ ನೀಡಿರಲಿಲ್ಲ ಎಂದು ವಿಕ್ಕಿ ಸಿಂಗ್ ಆರೋಪಿದ್ದಾರೆ.
Next Story