ಲಾಕ್ ಡೌನ್ ನಡುವೆ ರಾಮನವಮಿ ಆಚರಣೆ: ದೇವಸ್ಥಾನಕ್ಕೆ ಭೇಟಿ ನೀಡಿದ ನೂರಾರು ಮಂದಿ
ಕೊಲ್ಕತ್ತಾ: ಗುರುವಾರ ರಾಮನವಮಿಯಂದು ಪಶ್ಚಿಮ ಬಂಗಾಳದ ವಿವಿಧೆಡೆ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಸಾವಿರಾರು ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ವಿಹಿಂಪ ಹಾಗೂ ಇತರ ಸಂಘಟನೆಗಳು ತಾವು ಆಯೋಜಿಸುವ ವಾರ್ಷಿಕ ರಾಮನವಮಿ ರ್ಯಾಲಿಗಳನ್ನು ರದ್ದುಗೊಳಿಸಿದ್ದರೂ ರಾಜ್ಯದ ದೇವಳಗಳಲ್ಲಿ ಭಕ್ತರ ಉದ್ದ ಸರತಿ ಕಂಡು ಬಂದಿತ್ತು. ಕೊರೋನದಿಂದ ತಮ್ಮನ್ನು ರಕ್ಷಿಸುವಂತೆಯೂ ಭಕ್ತರು ರಾಮನಿಗೆ ಮೊರೆಯಿಟ್ಟರು. ಪೂಜೆ ಮುಗಿದ ಕೂಡಲೇ ಮನೆಗಳಿಗೆ ತೆರಳುವಂತೆ ಪೊಲೀಸರು ಜನರಲ್ಲಿ ಕೇಳಿಕೊಳ್ಳುತ್ತಿರುವುದು ಕಂಡು ಬಂತು.
ಬೆಲಿಯಾಘಟ ಹಾಗೂ ಮಿಣಿಕ್ತಲ ಪ್ರದೇಶದ ದೇವಳಗಳಲ್ಲಿ ಭಾರೀ ಜನಸಂದಣಿ ಕಂಡು ಬಂತು. ಭಕ್ತರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಸರತಿ ನಿಲ್ಲುವಂತೆ ದೇವಳಗಳು ಸೂಚಿಸಿದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
#Breaking | SHOCKER from West Bengal.
— TIMES NOW (@TimesNow) April 3, 2020
Locals celebrate Ram Navami with zero maintenance of social distancing.
Details by TIMES NOW's Sreyashi. pic.twitter.com/B0HYiJwCyA