Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೊರೋನ ನಡುವೆ ಕೋಮುದ್ವೇಷ ಸೋಂಕಿತರು...

ಕೊರೋನ ನಡುವೆ ಕೋಮುದ್ವೇಷ ಸೋಂಕಿತರು ಹರಡಿದ 7 ಸುಳ್ಳು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ5 April 2020 5:16 PM IST
share
ಕೊರೋನ ನಡುವೆ ಕೋಮುದ್ವೇಷ ಸೋಂಕಿತರು ಹರಡಿದ 7 ಸುಳ್ಳು ಸುದ್ದಿಗಳು

ದೇಶದಲ್ಲಿ ವ್ಯಾಪಿಸಿರುವ ಕೊರೋನಾ ಸೋಂಕಿಗೆ ಕೋಮು ಬಣ್ಣ ಬಳಿಯುವ ಪ್ರಯತ್ನ ನಡೆಯುತ್ತಿದ್ದು  ಸಾಮಾಜಿಕ ಜಾಲತಾಣದಲ್ಲಿ ಮತ್ತು ಕೆಲವು ಮಾಧ್ಯಗಳಲ್ಲಿ ಸುಳ್ಳುಗಳು ವ್ಯಾಪಕವಾಗಿ ಪ್ರಸಾರವಾಗಿರುವುದು ಬೆಳಕಿಗೆ ಬಂದಿದೆ.

ಹಣ್ಣುಗಳ ಮೇಲೆ ಉಗುಳುತ್ತಿರುವ ವ್ಯಕ್ತಿ

ಕೊರೋನ ವೈರಸ್ ಹರಡಲು ವ್ಯಕ್ತಿಯೊಬ್ಬ ಹಣ್ಣುಗಳಿಗೆ ಉಗುಳುತ್ತಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಆದರೆ ಇದು ಫೆಬ್ರವರಿ 16ರಂದು ನಡೆದ ಘಟನೆ ಎಂದು thequint.com ವರದಿ ಮಾಡಿದೆ. ಕೊರೋನ ವೈರಸ್ ಹರಡಲು ಈ ಕೃತ್ಯ ಎಸಗಲಾಗಿದೆ ಎನ್ನುವ ಆರೋಪಗಳು ಸುಳ್ಳು ಎಂದು ವರದಿ ಸ್ಪಷ್ಟಪಡಿಸಿದೆ.

ಪಾತ್ರೆಗಳನ್ನು ನೆಕ್ಕುತ್ತಿರುವ ವಿಡಿಯೋ

ಕೊರೋನಾ ಸೋಂಕು ಹರಡುವ ಉದ್ದೇಶದಿಂದ ಮುಸ್ಲಿಮರ ಗುಂಪೊಂದು ಪಾತ್ರೆಗಳನ್ನು ನೆಕ್ಕುತ್ತಿದೆ ಎಂಬ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೊ 2018ರ ಜುಲೈ 31ನೇ ತಾರೀಕಿನಷ್ಟು ಹಳೆಯದು ಮತ್ತು ದಾವೂದಿ ಬೊಹ್ರಾ ಸಮುದಾಯದವರು ತಮ್ಮ ಸಂಪ್ರದಾಯದಂತೆ ಆಹಾರ ಹಾಳು ಮಾಡಬಾರದೆಂಬ ದೃಷ್ಟಿಯಿಂದ ಪಾತ್ರೆಗಳನ್ನು ನೆಕ್ಕುತ್ತಿದ್ದಾರೆ ಎಂಬ ಶೀರ್ಷಿಕೆಯನ್ನು ಇದು ಹೊಂದಿದೆ.

ಸಾರ್ವಜನಿಕವಾಗಿ ಸೀನುತ್ತಿದ್ದಾರೆ ಎನ್ನುವ ಆರೋಪ

ದೆಹಲಿಯ ನಿಝಾಮುದ್ದೀನ್ ಮಸೀದಿಯಲ್ಲಿ ಕೊರೋನಾ ಹರಡುವ ಉದ್ದೇಶದಿಂದಲೇ ಸೀನುತ್ತಿದ್ದಾರೆ ಎಂಬ ಶೀರ್ಷಿಕೆಯ ವಿಡಿಯೊ ವೈರಲ್ ಆಗಿದೆ. ಆದರೆ ಇದು ಸುಳ್ಳು  ಎಂದು thelogicalindian.com ಸತ್ಯಶೋಧನಾ ತಂಡ ಪತ್ತೆ ಮಾಡಿದೆ. ಇದು ಸೂಫಿ ಸಂಪ್ರದಾಯದಂತೆ ನಡೆಯುವ ಆಚರಣೆಯಾಗಿದ್ದು, ಇಲ್ಲಿ ಯಾರೂ ಸೀನುತ್ತಿಲ್ಲ. ಈ ಆಚರಣೆಯ ಪ್ರಕಾರ ಉಸಿರನ್ನು ಎಳೆದು ಹೊರಗೆ ಬಿಡಲಾಗುತ್ತಿದೆ. ಇಷ್ಟೇ ಅಲ್ಲದೆ ಈ ವಿಡಿಯೋ ನಿಝಾಮುದ್ದೀನ್ ಮಸೀದಿಯದ್ದಲ್ಲ.

ಪೊಲೀಸರತ್ತ ಉಗಿಯುತ್ತಿರುವ ತಬ್ಲೀಗಿ: ಆರೋಪ

ಕೊರೋನಾ ಪೀಡಿತ ತಬ್ಲೀಗಿಯೊಬ್ಬ ಪೊಲೀಸರತ್ತ ಉಗಿಯುತ್ತಿದ್ದಾನೆ ಎಂದು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೊ ಕೂಡಾ ನಕಲಿ ಎನ್ನುವುದನ್ನು bbc.com ಫ್ಯಾಕ್ಟ್ ಚೆಕ್ ಬಹಿರಂಗಪಡಿಸಿದೆ. ಈ ಘಟನೆ ಫೆಬ್ರವರಿ 29ರಂದು ನಡೆದಿತ್ತು. ತನ್ನ ಮನೆಯವರು ತಂದಿದ್ದ ಊಟ ನೀಡಿಲ್ಲ ಎಂದು ಬಂಧಿತ ವ್ಯಕ್ತಿಯೊಬ್ಬ ಪೊಲೀಸರ ಮೇಲೆ ಉಗುಳಿದ್ದ. ನಂತರ ಪೊಲೀಸರು ಆತನಿಗೆ ಥಳಿಸಿದ್ದರು. ಈ ಘಟನೆಯ ವಿಡಿಯೊ ಫೆಬ್ರವರಿ 29ರಂದೇ ವೈರಲ್ ಆಗಿತ್ತು.

ಹಿಂದೂ ಅರ್ಚಕರಿಗೆ ಹೊಡೆಯುತ್ತಿರುವ ಆಬಿದ್ ಖಾನ್: ಆರೋಪ

ರೇವಾ ಎಸ್ಪಿ ಆಬಿದ್ ಖಾನ್ ಎಂಬವರು ಹಿಂದೂ ಅರ್ಚಕರೊಬ್ಬರನ್ನು  ಹೊಡೆಯುತ್ತಿದ್ದಾರೆ ಎನ್ನಲಾದ  ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ  ವೈರಲ್‍ ಆಗಿದ್ದು, ಇದು ಕೂಡಾ ನಕಲಿ ಎಂದು thelallantop.com ವರದಿ ಮಾಡಿದೆ. ಈ ಫೋಟೊದಲ್ಲಿರುವ ಅಧಿಕಾರಿ ಆಬಿದ್ ಖಾನ್ ಅಲ್ಲ ಬದಲಾಗಿ ಅವರ ಹೆಸರು ರಾಜ್ ಕುಮಾರ್ ಮಿಶ್ರಾ. ಘಟನೆ ನಡೆದಾಗ ದೇವಸ್ಥಾನದಲ್ಲಿ ಅರ್ಚಕರು ಮಾತ್ರ ಇದ್ದದ್ದಲ್ಲ, ಹಲವು ಮಹಿಳೆಯರು ಕೂಡ ಇದ್ದರು. ನಂತರ ಅವರನ್ನು ತೆರವುಗೊಳಿಸಲಾಗಿತ್ತು. ಇಷ್ಟೇ ಅಲ್ಲದೆ ಲಾಕ್ ಡೌನ್ ಉಲ್ಲಂಘನೆಯ ಕಾರಣಕ್ಕಾಗಿ ಇದೇ ಸಂದರ್ಭ ಮಸೀದಿಗಳಲ್ಲಿ ಇದ್ದವರ ಮೇಲೂ ಕ್ರಮ ಕೈಗೊಳ್ಳಲಾಗಿತ್ತು.

ಆಹಾರಕ್ಕೆ ಉಗುಳುತ್ತಿರುವ ಮುಸ್ಲಿಂ ವ್ಯಕ್ತಿ ಎಂಬ ವಿಡಿಯೋ

ಕೊರೋನ ವೈರಸ್ ಹಿನ್ನೆಲೆಯಲ್ಲಿ ಭಾರತೀಯ ಹೋಟೆಲ್‍ ಒಂದರಲ್ಲಿ ಗ್ರಾಹಕರಿಗೆ ಆಹಾರ ಪೂರೈಸುವ ಮುನ್ನ ಸೋಂಕಿತ ಮುಸ್ಲಿಂ ವ್ಯಕ್ತಿ ಉಗುಳುತ್ತಿದ್ದಾನೆ ಎಂಬ ವಿಡಿಯೊ ಕೂಡಾ ಸುಳ್ಳು ಎನ್ನುವುದನ್ನು altnews.in ಸಾಬೀತುಪಡಿಸಿದೆ.  ಆದರೆ 2019ರ ಮೇ ತಿಂಗಳಿನಿಂದಲೇ ಈ ವಿಡಿಯೋ ವೈರಲ್ ಆಗಿತ್ತು.

ಪಾಟ್ನಾದಲ್ಲಿ ಅಡಗಿದ್ದ ಇರಾನಿಗಳು ಮತ್ತು ಇಟಲಿ ಪ್ರಜೆಗಳು: ಆರೋಪ

ಜಾಲತಾಣಗಳಲ್ಲಿ ವೈರಲ್‍ ಆದ ಮತ್ತೊಂದು ವಿಡಿಯೋದಲ್ಲಿ ಪಾಟ್ನಾದ ಖುರ್ಜಿಯಲ್ಲಿ ಕಳೆದ ತಿಂಗಳು 50 ಮಂದಿ ಇಟಾಲಿಯನ್ ಹಾಗೂ ಇರಾನಿಗಳು ಅಡಗಿದ್ದಾರೆ ಎಂದು ಪ್ರತಿಪಾದಿಸಲಾಗಿತ್ತು. ಆದರೆ ವಾಸ್ತವವಾಗಿ ಅವರು ಇಟಲಿಯನ್ನರೂ ಅಲ್ಲ ಹಾಗೂ ಕೊರೋನಾ ಸೋಂಕಿತರಲ್ಲ ಎನ್ನುವುದನ್ನು altnews.in ಪತ್ತೆ ಮಾಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X