ಚಿತ್ರಕಲಾ ಸ್ಪರ್ಧೆ
ಮಂಗಳೂರು, ಎ.5: ಕರೋನ ರಜೆಗೆ ಭೀತಿಯಿಂದ ಜಗತ್ತು ತಲ್ಲಣಗೊಂಡು ದೇಶ ಲಾಕ್‌ಡೌನ್ ಆಗಿರುವ ಸಮಯವನ್ನು ಸದುಪಯೋಗಪಡಿಸಿ ಕೊಳ್ಳುವ ನಿಟ್ಟಿನಲ್ಲಿ ಪ್ರಸಾದ್ ಆರ್ಟ್ ಗ್ಯಾಲರಿ ಹಾಗೂ ಪ್ರಸಾದ್ ಚಿತ್ರ ಕಲಾ ಶಾಲೆಯು ‘ಚಿತ್ರಕಲಾ’ ಸ್ಪರ್ಧೆಯನ್ನು ಆಯೋಜಿಸಿದೆ.
‘ನಮ್ಮ ಭೂಮಿಯನ್ನು ರಕ್ಷಿಸಿ’ ಎಂಬ ವಿಷಯಲ್ಲಿ ಎಲ್‌ಕೆಜಿಯಿಂದ 1ನೆ ತರಗತಿ, 2ರಿಂದ 4ನೆ ತರಗತಿ, 5ರಿಂದ 7ನೇ ತರಗತಿ, 8ರಿಂದ 10ನೆ ತರಗತಿ ಮತ್ತು ಸಾರ್ವಜನಿಕರು ಹೀಗೆ ಐದು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಚಿತ್ರಿಸಲು ಕ್ರೇಯಾನ್, ಬಣ್ಣದ ಪೆನ್ಸಿಲ್, ಕಪ್ಪುಬಿಳುಪು ಅಥವಾ ಜಲವರ್ಣದಲ್ಲಿ ಗರಿಷ್ಠ 3 ಚಿತ್ರಗಳನ್ನು ರಚಿಸಬಹುದು. ಮೇ 29ರೊಳಗೆ ಪ್ರಸಾದ್ ಆಟ್ ಗ್ಯಾಲರಿಗೆ ಚಿತ್ರಗಳನ್ನು ಅಂಚೆ ಮೂಲಕ ಅಥವಾ ಮುಖತಃ ತಲುಪಿಸಬಹುದು.
ಮಾಹಿತಿಗಾಗಿ ಮೊ.ಸಂ: 9845380095/974161584ನ್ನು ಸಂಪರ್ಕಿಬಹುದು ಎಂದು ಸಂಸ್ಥೆಯ ನಿರ್ದೇಶಕ ಕೋಟಿ ಪ್ರಸಾದ್ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





