ತಬ್ಲೀಗಿ ಸದಸ್ಯರು ಗದ್ದಲ ಸೃಷ್ಟಿಸಿದ್ದಾರೆ, ಮಲವಿಸರ್ಜನೆ ಮಾಡಿದ್ದಾರೆ ಎನ್ನುವುದು ಸುಳ್ಳು: ಸಹರಾನ್ಪುರ ಪೊಲೀಸರು
"ಪತ್ರಿಕೆಗಳು, ಚಾನೆಲ್ ಗಳ ವರದಿಗಳಲ್ಲಿ ಸತ್ಯಾಂಶವಿಲ್ಲ"

ಉತ್ತರ ಪ್ರದೇಶ: ಕ್ವಾರಂಟೈನ್ ನಲ್ಲಿರುವ ತಬ್ಲೀಗಿ ಜಮಾಅತ್ ಸದಸ್ಯರು ಮಾಂಸಾಹಾರಕ್ಕಾಗಿ ಬಲವಂತಪಡಿಸುತ್ತಿದ್ದಾರೆ ಎನ್ನುವ ವರದಿಗಳು ಸತ್ಯಕ್ಕೆ ದೂರವಾದದ್ದು ಎಂದು ಉತ್ತರ ಪ್ರದೇಶದ ಸಹರಾನ್ಪುರದ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕೊರೋನ ವೈರಸ್ ಬಿಕ್ಕಟ್ಟಿನ ನಡುವೆ ತಬ್ಲೀಗಿ ಜಮಾಅತ್ ವಿರುದ್ಧ ಹರಡಲಾಗುತ್ತಿರುವ ಸುಳ್ಳುಗಳ ಬಗ್ಗೆ ಪೊಲೀಸರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
"ಕ್ವಾರಂಟೈನ್ ನಲ್ಲಿ ಮಾಂಸಾಹಾರ ಸಿಗುತ್ತಿಲ್ಲ ಎನ್ನುವ ಕಾರಣಕ್ಕಾಗಿ ತಬ್ಲೀಗಿ ಸದಸ್ಯರು ಗದ್ದಲ ಸೃಷ್ಟಿಸಿದ್ದಾರೆ ಮತ್ತು ಸಾರ್ವಜನಿಕವಾಗಿ ಮಲವಿಸರ್ಜನೆ ಮಾಡಿದ್ದಾರೆ ಎನ್ನುವ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನಾವು ರಾಮ್ ಪುರ ಪೊಲೀಸರಿಗೆ ತಿಳಿಸಿದ್ದೆವು. ಹಲವು ಪತ್ರಿಕೆಗಳು, ಸುದ್ದಿ ಚಾನೆಲ್ ಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಆರೋಪಗಳು ಸುಳ್ಳು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ" ಎಂದು ಸಹರಾನ್ಪುರ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
@Uppolice @adgzonemeerut @igrangemeerut @digsaharanpur @Dineshdcop pic.twitter.com/ZYY6kNirAE
— Saharanpur Police (@saharanpurpol) April 5, 2020







