ಕೇಂದ್ರದ ಪ್ಯಾಕೇಜ್‌ನಲ್ಲಿ ರಾಜ್ಯಕ್ಕೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಮಾಹಿತಿ ಇಲ್ಲ: ಸಂಸದೆ ಶೋಭಾ
ಉಡುಪಿ, ಎ.5: ಕೇಂದ್ರ ಸರಕಾರ ಘೋಷಣೆ ಮಾಡಿರುವ 1.70ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಕರ್ನಾಟಕಕ್ಕೆ ಎಷ್ಟು ಅನುದಾನ ಬಂದಿದೆ ಎಂಬು ದರ ಬಗ್ಗೆ ಮಾಹಿತಿ ಇಲ್ಲ. ಆದರೆ ರಾಜ್ಯ ಸರಕಾರ ಆಯಾ ಜಿಲ್ಲಾಧಿಕಾರಿಗಳು ಕೇಳುವ ಔಷಧಿ, ಆಹಾರ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಒದಗಿಸುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಸಂದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಪಿಎಂ ಕೇರ್‌ಗೆ ತನ್ನ ನಿಧಿಯಿಂದ ಒಂದು ಕೋಟಿ ರೂ. ಅನುದಾನ ನೀಡಿ ದ್ದೇನೆ. ರಾಜ್ಯ ಸರಕಾರ ಕೇಳಿದರೆ ಇಲ್ಲಿಯೂ ಕೊಡುತ್ತೇವೆ. ಇದರಲ್ಲಿ ಕೇಂದ್ರ, ರಾಜ್ಯ ಸರಕಾರ ಎಂಬ ತಾರತಮ್ಯ ಇಲ್ಲ. ನಮಗೆ ಕೊರೋನ ಯುದ್ಧವನ್ನು ಗೆಲ್ಲಬೇಕಾಗಿದೆ ಎಂದರು.
ದೀಪ ಬೆಳಗಲು ಪ್ರಧಾನಿ ಬಿಜೆಪಿ ಸಂಸ್ಥಾಪನಾ ದಿನವನ್ನು ತಲೆಯಲ್ಲಿಟ್ಟು ಕರೆ ಕೊಟ್ಟಿಲ್ಲ. ಇದು ಕಾಕತಾಳೀಯವಾಗಿ ಬಂದಿರಬಹುದು. ಇದರ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಅವರು, ಮೋದಿ ಕೇವಲ ಭಾರತಕ್ಕೆ ಸೀಮಿತವಾಗಿ ಕೆಲಸ ಮಾಡುತ್ತಿಲ್ಲ. ಜಗತ್ತಿನ ಬಡ ರಾಷ್ಟ್ರಗಳಿಗೆ ಸಹಾಯ ಹಸ್ತ ನೀಡುವ ಕೆಲಸ ಕೂಡ ಮಾಡುತ್ತಿದ್ದಾರೆ ಎಂದರು.
ಕೊರೋನದಲ್ಲಿ ಕೇರಳ ರೆಡ್ ಝೋನ್ ಏರಿಯಾ ಆಗಿದ್ದು, ಕಾಸರಗೋಡು ಇಡೀ ದೇಶದ ರೆಡ್ ಝೋನ್ ಏರಿಯಾ ಆಗಿದೆ. ಕೇರಳದವರು ಕೊರೋನ ಹಬ್ಬಿಸುವುದನ್ನು ನಾವು ಸಹಿಸಲ್ಲ. ಕಾಸರಗೋಡಿಗೆ ಚಿಕ್ಕಮಗಳೂರಿನಿಂದ ತರಕಾರಿ ರವಾನೆ ಮಾಡಿದ್ದೇವೆ. ಕೇರಳಕ್ಕೆ ಅಗತ್ಯ ಸೇವೆ ಮತ್ತು ವೈದ್ಯಕೀಯ ಸೇವೆ ನೀಡಲು ಕರ್ನಾಟಕ ಸಿದ್ಧವಿದೆ. ಆದರೆ ಕೇರಳ ಕಾಸರಗೋಡಿನ ಜನ ಕರ್ನಾಟಕಕ್ಕೆ ಬರಬಾರದು. ನಾವು ಯಾವುದೇ ಕಾರಣಕ್ಕೂ ಇದನ್ನು ಸಹಿಸುವು ದಿಲ್ಲ ಎಂದು ಅವರು ತಿಳಿಸಿದರು.
ದೇಶದಲ್ಲಿ ಕೊರೋನ ಜಿಹಾದ್ ನಡೆಯುತ್ತಿದೆ. ಇದು ಭಯೋತ್ಪಾದನೆಯ ಮುಂದುವರಿದ ಭಾಗ. ಕ್ವಾರಂಟೈನ್‌ನಲ್ಲಿ ಇರುವ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಈ ನಿಟ್ಟಿನಲ್ಲಿ ಕಠಿಣವಾದ ಕಾನೂನು ದೇಶದಲ್ಲಿ ಜಾರಿಗೆ ಬರಬೇಕು. ಕೊರೋನ ವಿಚಾರದಲ್ಲಿ ನಾನು ರಾಜಕೀಯ ಮಾಡುತ್ತಿಲ್ಲ ಕೊರೊನಾ ಹಬ್ಬಿಸುವ ದುರ್ಬುದ್ಧಿಯನ್ನು ಜನತೆಯ ಮುಂದೆ ತೆರೆದಿಡುತ್ತಿದ್ದೇನೆ ಎಂದು ಅವರು ಹೇಳಿದರು.







