ಲಾಕ್‌ಡೌನ್ ಉಲ್ಲಂಘನೆ: 221 ವಾಹನ ಮುಟ್ಟುಗೋಲು
ಮಂಗಳೂರು, ಎ.5: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಉಲ್ಲಂಘನೆ ಮಾಡಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ 221 ವಾಹನಗಳನ್ನು ನಗರ ಪೊಲೀಸರು ರವಿವಾರ ಮುಟ್ಟುಗೋಲು ಹಾಕಿ, ಪ್ರಕರಣ ದಾಖಲಿಸಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗು ತಪಾಸಣೆ ನಡೆಸಲಾಗುತ್ತಿದೆ. ಆದರೂ ಕೆಲವರು ಲಾಕ್‌ಡೌನ್ ಉಲ್ಲಂಘನೆ ಮಾಡುತ್ತಿದ್ದು, ಪೊಲೀಸರು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಪ್ರತೀ ದಿನವೂ ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಕೂಡ ವಾಹನ ಸವಾರರು ನಿರ್ಲಕ್ಷಿಸುತ್ತಿರುವುದು ವಾಹನಗಳ ಮುಟ್ಟುಗೋಲಿನ ಸಂಖ್ಯೆ ಹೆಚ್ಚುತ್ತಿರುವುದು ಸಾಕ್ಷಿಯಾಗಿದೆ.
Next Story





