ರಂಗಕಲಾವಿದ ಅನಿಲ ಠಕ್ಕರ್ ನಿಧನ

ಹುಬ್ಬಳ್ಳಿ, ಎ.5: ಕರ್ನಾಟಕ ಉರ್ದು ಅಕಾಡೆಮಿಯ ಸದಸ್ಯರಾಗಿದ್ದ ರಂಗಕಲಾವಿದ ಅನಿಲ ಠಕ್ಕರ್(85) ಶನಿವಾರ ಧಾರವಾಡದಲ್ಲಿ ನಿಧನರಾದರು. ಇವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ನಾಟಕ, ಕತೆ, ಕಾದಂಬರಿ ಸೇರಿ 13ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುವ ಅವರು, ಹುಬ್ಬಳ್ಳಿಯ ರಂಗಭೂಮಿ ಕ್ಷೇತ್ರಕ್ಕೆ ಆಧುನಿಕ ರಂಗಭೂಮಿಯನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಟ, ನಿರ್ದೇಶಕರಾಗಿ, ಕುಂಚ ಕಲಾವಿದರಾಗಿ, ಸಿನೆಮಾ ನಟರಾಗಿಯೂ ಜನಪ್ರಿಯರಾಗಿದ್ದರು.
ಪರಿಚಯ: ಗುಜರಾತ್‍ನಲ್ಲಿ ಜನಿಸಿದ ಅನಿಲ ಠಕ್ಕರ್, 7ನೇ ತರಗತಿವರೆಗೆ ಉರ್ದು ಬಳಿಕ 10ನೇ ತರಗತಿವರೆಗೆ ಗುಜರಾತಿನಲ್ಲಿ ಶಿಕ್ಷಣ ಪಡೆದರು. ನಂತರ 1950ರಲ್ಲಿ ಧಾರವಾಡದ ಸ್ಕೂಲ್ ಆಫ್ ಆರ್ಟ್‍ಗೆ ಸೇರಿದರು. ಅಲ್ಲಿ ಕಲಿಯುತ್ತಿರುವಾಗಲೇ ಸಿಕಂದರ್ ನಾಟಕದ ಮೂಲಕ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು.
Next Story





