ಡ್ರಗ್ಸ್ ಗ್ಯಾಂಗ್ಗಳ ನಡುವೆ ಶೂಟೌಟ್ಗೆ 19 ಬಲಿ
ಮೆಕ್ಸಿಕೊ, ಎ.5: ಮೆಕ್ಸಿಕೊದ ಉತ್ತರ ಭಾಗದ ರಾಜ್ಯವಾದ ಚಿಹುವಾಹುವಾದಲ್ಲಿ ಮಾದಕದ್ರವ್ಯ ಜಾಲದ ಶೂಟರ್ಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ.
ಅಮೆರಿಕಕ್ಕೆ ಮಾದಕದ್ರವ್ಯ ಕಳ್ಳಸಾಗಣೆ ಮಾಡುವ ದಾರಿಗಳ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಈ ಕ್ರೀಮಿನಲ್ ಗುಂಪುಗಳು ಪರಸ್ಪರ ಕಾಳಗ ನಿರತವಾಗಿವೆಯೆಂದು ಚಿಹುವಾಹುವಾದ ಅಟಾರ್ನಿ ಜನರಲ್ ಸೀಸರ್ ಪೆನಿಚೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮದೆರಾ ನಗರದಲ್ಲಿ ಶುಕ್ರವಾರ ಸಂಜೆ ಗುಂಡಿನ ಘರ್ಷಣೆ ನಡೆದಿದ್ದು ಸ್ಥಳದಲ್ಲಿ 18 ಶವಗಳು ಪತ್ತೆಯಾಗಿ. ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ವ್ಯಕ್ತಿ ಆನಂತರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆಂದು ಅವರು ಹೇಳಿದ್ದಾರೆ. ಸ್ಥಳದಿಂದ 18 ಗನ್ಗಳು, ಎರಡುವಹನಗಳು ಹಾಗೂ ಎರಡು ಗ್ರೆನೇಡ್ಗಳನ್ನು ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Next Story