'ಚೈನಾ ವೈರಸ್ ಗೋ ಬ್ಯಾಕ್': ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಬಿಜೆಪಿ ಶಾಸಕನ ಪ್ರತಿಭಟನೆ!
ಹೈದರಾಬಾದ್: ರವಿವಾರ ರಾತ್ರಿ ಕೊರೋನ ವೈರಸ್ ವಿರುದ್ಧ ಪ್ರತಿಭಟನೆ ನಡೆಸಿದ ತೆಲಂಗಾಣದ ಏಕೈಕ ಬಿಜೆಪಿ ಶಾಸಕ ರಾಜಾ ಸಿಂಗ್, 'ಚೈನಾ ವೈರಸ್ ಗೋ ಬ್ಯಾಕ್' ಘೋಷಣೆಗಳನ್ನು ಕೂಗಿದರು. ಅಚ್ಚರಿಯೆಂದರೆ ಈ ಸಂದರ್ಭ ಸಿಂಗ್ ಮಾಸ್ಕ್ ಧರಿಸಿದ್ದರೂ ಅದನ್ನು ಮುಖದಿಂದ ಜಾರಿಸಿದ್ದರು. ಸಾಮಾಜಿಕ ಅಂತರವನ್ನೂ ಕಾಪಾಡಲು ಅವರು ಮರೆತಿದ್ದರು.
ರವಿವಾರ ರಾತ್ರಿ ಒಂಬತ್ತು ಗಂಟೆಗೆ ಸರಿಯಾಗಿ ಒಂಬತ್ತು ನಿಮಿಷಗಳ ಕಾಲ ವಿದ್ಯುತ್ ದೀಪಗಳನ್ನು ಆರಿಸಿ ಹಣತೆ ಹಚ್ಚುವಂತೆ ಪ್ರಧಾನಿ ಮೋದಿ ನೀಡಿದ ಕರೆಯಂತೆ ತಮ್ಮ ಬೆಂಬಲಿಗರೊಂದಿಗೆ ಪಂಜು, ಹಣತೆ, ಮೋಂಬತ್ತಿ ಹಾಗೂ ಮೊಬೈಲ್ ಫ್ಲ್ಯಾಶ್ ಲೈಟ್ ಬೆಳಗುತ್ತಾ ``ಗೋ ಬ್ಯಾಕ್, ಗೋ ಬ್ಯಾಕ್, ಚೈನೀಸ್ ವೈರಸ್ ಗೋ ಬ್ಯಾಕ್'' ಘೋಷಣೆಗಳನ್ನು ಕೂಗಿದರು.
ಹೈದರಾಬಾದ್‍ನ ಗೋಶಮಹಲ್ ಕ್ಷೇತ್ರದ ಶಾಸಕರಗಾಗಿರುವ ಸಿಂಗ್ ಜತೆ ಅವರ ಒಂದು ಡಜನಿಗೂ ಹೆಚ್ಚು ಬೆಂಬಲಿಗರಿದ್ದರು. ಈ ಕುರಿತಂತೆ ರಾಜಾ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲೂ ಫೋಟೋ ಹಾಗೂ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದರು.
Sequel to Go Corona Go is here. "Chinese Virus Go Back" Ft. Raja Singh, BJP MLA from Goshamahal, Hyderabad #9बजे9मिनट pic.twitter.com/lxuQbGYflG
— No Show Rajneesh (@GochiwaleGuruji) April 5, 2020