ದ.ಕ.: ಕೊರೋನಮುಕ್ತರಾದ ಇನ್ನೂ ಮೂವರು ಇಂದು ಬಿಡುಗಡೆ

ಮಂಗಳೂರು: ಎ.6: ಕೊರೋನ ಸೋಂಕಿತ ಕಾಸರಗೋಡಿನ ನಾಲ್ವರ ಪೈಕಿ ಸಂಪೂರ್ಣ ಗುಣಮುಖರಾದ ಮೂವರು ಸೋಮವಾರ ನಗರದ ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
ವಿದೇಶದಿಂದ ವಿಮಾನದ ಮೂಲಕ ಮಂಗಳೂರಿಗೆ ಬಂದಿದ್ದ ಈ ನಾಲ್ಚರಲ್ಲಿ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಬಳಿಕ ಈಚೆಗೆ ಸತತ ಪರೀಕ್ಷೆಗಳಲ್ಲಿ ನೆಗೆಟಿವ್ ವರದಿ ಬಂದಿತ್ತು. ಸೋಮವಾರ ಕ್ವಾರಂಟೈನ್ ಪೂರ್ಣಗೊಳಿಸಲಿದ್ದು, ಸಂಜೆ ವೇಳೆಗೆ ಬಿಡುಗಡೆ ಹೊಂದಲಿದ್ದಾರೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕಿತರಲ್ಲಿ ಗುಣಮುಖ ಹೊಂದಿ ಬಿಡುಗಡೆ ಹೊಂದಿದವರ ಸಂಖ್ಯೆ ನಾಲ್ಕಕ್ಕೇರಿದೆ.
Next Story





