ಬಾಗಲಕೋಟೆ: ಊರಿಗೆ ಪ್ರವೇಶಿಸದಂತೆ ಮುಸ್ಲಿಮರನ್ನು ತಡೆದು ಹಲ್ಲೆ ನಡೆಸಿದ ದುಷ್ಕರ್ಮಿಗಳು
"ನಿಮ್ಮಿಂದಲೇ ಕೊರೋನ ವೈರಸ್ ಹಬ್ಬುತ್ತಿದೆ"

ಬಾಗಲಕೋಟೆ, ಎ.6: ತಮ್ಮ ಊರಿಗೆ ಪ್ರವೇಶಿಸಬೇಡಿ ಎಂದು ಮೂವರು ಮುಸ್ಲಿಂ ವ್ಯಕ್ತಿಗಳನ್ನು ತಡೆದು ಹಲ್ಲೆ ನಡೆಸಿರುವ ಘಟನೆ ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬಿದರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಗ್ರಾಮದ ಮುಸ್ಲಿಂ ವ್ಯಕ್ತಿಗಳನ್ನು ಮಾರ್ಗ ಮಧ್ಯೆ ನಿಲ್ಲಿಸಿ ಒದ್ದು, ಕೋಲಿನಿಂದ ಹೊಡೆದು ಹಲ್ಲೆ ಮಾಡಲಾಗಿದೆ. ಅಲ್ಲದೇ, ನಿಮ್ಮಿಂದಲೇ ಕೊರೋನ ವೈರಸ್ ಹಬ್ಬುತ್ತಿದೆ. ನಮ್ಮ ಗ್ರಾಮದ ಕಡೆ ಯಾಕೆ ಬರುತ್ತಿದ್ದೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.
ನಿಮ್ಮ ಗ್ರಾಮದ ಕಡೆ ಬರುವುದಿಲ್ಲ ಬಿಟ್ಟು ಬಿಡಿ ಎಂದು ಮೂವರು ಮುಸ್ಲಿಂ ವ್ಯಕ್ತಿಗಳು ಬೇಡಿಕೊಂಡಿದ್ದಾರೆ. ಅದರೂ ಕೇಳದ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Next Story