ಕೊರೋನ ಬಿಕ್ಕಟ್ಟು: ಪ್ರಧಾನಿ, ರಾಷ್ಟ್ರಪತಿ, ಕೇಂದ್ರ ಸಚಿವರ ವೇತನದಲ್ಲಿ 30 ಶೇ. ಕಡಿತ
ಹೊಸದಿಲ್ಲಿ: ಕೊರೋನ ವೈರಸ್ ಬಿಕ್ಕಟ್ಟು ಮತ್ತು ಆರ್ಥಿಕ ಹಿಂಜರಿತಗಳನ್ನು ಎದುರಿಸಬೇಕಾದ ಕಾರಣ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಎಲ್ಲಾ ಸಂಸದರ ವೇತನದಲ್ಲಿ 30 ಶೇ. ಕಡಿತಕ್ಕೆ ನಿರ್ಧರಿಸಲಾಗಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಎಲ್ಲಾ ರಾಜ್ಯಗಳ ರಾಜ್ಯಪಾಲರ ವೇತನದಲ್ಲಿ 30 ಶೇ. ಕಡಿತಕ್ಕೆ ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
Next Story