ಮುಸ್ಲಿಮರ ನಿಂದನೆ: ಕಠಿಣ ಕ್ರಮಕ್ಕೆ ಸೆಂಟ್ರಲ್ ಕಮಿಟಿ ಆಗ್ರಹ
ಮಂಗಳೂರು, ಎ.8: ಕೊರೋನ ವೈರಸ್ ಮಧ್ಯೆ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಹಾಗೂ ಕೋಮು ಪ್ರಚೋದನಕಾರಿಯಾಗಿ ಸುದ್ದಿ ಮತ್ತು ಬರಹಗಳನ್ನು ಪ್ರಚಾರ ಮಾಡಲಾಗುತ್ತಿದೆ. ಈಗಾಗಲೆ ದ.ಕ.ಜಿಲ್ಲಾ ಎಸ್ಪಿ ಈ ಬಗ್ಗೆ ನಾಲ್ಕು ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಶ್ಲಾಘನೀಯ. ಮುಂದೆಯೂ ಯಾವುದೇ ಕೋಮಿನ ಧಾರ್ಮಿಕತೆಗೆ ದಕ್ಕೆಯಾಗುವಂತಹ ಪ್ರಚೋದನಕಾರಿ ಸುದ್ದಿ, ಚಿತ್ರ ಪ್ರಚಾರ ಮಾಡಿದರೆ ಅಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಆಗ್ರಹಿಸಿದ್ದಾರೆ.
Next Story





