ಮಂಗಳೂರು ಸೇರಿ ರಾಜ್ಯದ 11ಲ್ಯಾಬ್ಗಳಲ್ಲಿ ಕೋವಿಡ್ -19 ಸೋಂಕಿನ ಮಾದರಿ ಪರೀಕ್ಷೆ: ಆರೋಗ್ಯ ಇಲಾಖೆ

ಸಾಂದರ್ಭಿಕ ಚಿತ್ರ
ಮಂಗಳೂರು, ಎ. 8:ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವೈರಾಲಜಿ ಲ್ಯಾಬ್ ನಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರ ಜಿಲ್ಲೆಗಳ ಕೊವಿಡ್-19 ನೆ ಸಂಬಂಧಿಸಿದ ಗಂಟಲ ದ್ರವ ಸೇರಿದಂತೆ ಸೋಂಕಿಗೆ ಸಂಬಂಧಿಸಿದ ಮಾದರಿಗಳ ಪರೀಕ್ಷೆ ನಡೆಸಲಾಗುವುದು.
ಮಂಗಳೂರು ಸೇರಿದಂತೆ ರಾಜ್ಯದಲ್ಲಿ ವಿವಿಧ ಕಡೆ ಒಟ್ಟು 11 ಕೇಂದ್ರಗಳಲ್ಲಿ ಈ ರೀತಿಯ ತಪಾಸಣಾ ಕೇಂದ್ರಗಳಲ್ಲಿ ಕೊರೋನ ಸೋಂಕು ಪರೀಕ್ಷಾ ಲ್ಯಾಬ್ಗಳನ್ನು ತೆರಯಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಜಿಲ್ಲಾ ಆರೋಗ್ಯಾಧಿಕಾರಿಗಳ ಮೂಲಕ ಈ ಲ್ಯಾಬ್ಗಳಿಗೆ ಕೊರೋನ ಸೋಂಕು ಪರೀಕ್ಷೆಗೆ ಸಂಬಂಧಿಸಿ ಮಾದರಿಯನ್ನು ಕಳುಹಿಸಿ ಪರೀಕ್ಷಿಸಲಾಗುತ್ತದೆ. ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮೈಸೂರು ಮೆಡಿಕಲ್ ಕಾಲೇಜ್ ಲ್ಯಾಬ್ , ಹಾಸನ ,ಚಿಕ್ಕಮಗಳೂರಿಗೆ ಸಂಬಂಧಿಸಿದಂತೆ ಹಾಸನ ವೈದ್ಯಕೀಯ ಸಂಸ್ಥೆಯ ಲ್ಯಾಬ್, ಬಳ್ಳಾರಿ, ಕೊಪ್ಪಳ, ಗದಗ, ರಾಯಚೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ವಿಜಯನಗರ ವೈದ್ಯಕೀಯ ಸಂಸ್ಥೆಯ ಲ್ಯಾಬ್, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಶಿವಮೊಗ್ಗ ವೈದ್ಯಕೀಯ ಸಂಸ್ಥೆಯ ಲ್ಯಾಬ್, ಗುಲ್ಬರ್ಗ, ಬೀದರ್, ಬಿಜಾಪುರ, ಯಾದಗಿರಿ ಜಿಲ್ಲೆಗಳಿಗೆ ಗುಲ್ಬರ್ಗ ವೈದ್ಯಕೀಯ ಸಂಸ್ಥೆಯ ಲ್ಯಾಬ್, ತುಮಕೂರು, ಕೋಲಾರ, ರಾಮನಗರ ಜಿಲ್ಲೆಗಳಿಗೆ ಬೆಂಗಳೂರು ವೈದ್ಯಕೀಯ ಕಾಲೇಜ್ನ ಲ್ಯಾಬ್, ಹುಬ್ಬಳ್ಳಿ, ದಾರವಾಡ , ಹಾವೇರಿ, ಬಾಗಲಕೋಟೆ, ಬೆಳಗಾಂ ಜಿಲ್ಲೆಗಳಿಗೆ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಲ್ಯಾಬ್, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಎನ್ಐವಿ ಆರ್ಜಿಐಸಿಡಿ ಬೆಂಗಳೂರು ಲ್ಯಾಬ್, ಬೆಂಗಳೂರು ನಗರ ಮತ್ತು ಮಂಡ್ಯ ಜಿಲ್ಲೆಗಳಿಗೆ ನಿಮ್ಹಾನ್ಸ್ ಬೆಂಗಳೂರು ಲ್ಯಾಬ್, ಚಿಕ್ಕಬಳ್ಳಾಪುರ ಜಿಲ್ಲೆಗೆ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯ ಲ್ಯಾಬ್ ಗಳಲ್ಲಿ ಕೊವಿಡ್-19 ವೈರಾಣು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಪ್ರಕಟಣೆ ತಿಳಿಸಿದೆ.







