ಉಜ್ವಲ ಗ್ರಾಹಕರಿಗೆ ಗರೀಬ್ ಕಲ್ಯಾಣ ಯೋಜನೆಯ ಪ್ರಕ್ರಿಯೆ ಸರಳೀಕರಣ: ನೂರಾನ
ಬೆಂಗಳೂರು, ಎ.8: ಭಾರತ ಸರಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಎಲ್ಲ ಉಜ್ವಲ ಯೋಜನೆಯ ಗ್ರಾಹಕರಿಗೆ ಮುಂದಿನ ಮೂರು ತಿಂಗಳುಗಳ ಕಾಲ ಎಪ್ರಿಲ್‍ನಿಂದ ಜೂನ್‍ವರೆಗೆ 14.2 ಕೆಜಿಯ 3 ಅಥವಾ 5 ಕೆಜಿಯ ಎಂಟು ಸಿಲಿಂಡರ್‍ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಕೋವಿಡ್-19ರಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇದರ ಪ್ರಕ್ರಿಯೆ ಸರಳ ಮತ್ತು ಸುಲಭಗೊಳಿಸಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್‍ನ ಉಪ ಮಹಾ ಪ್ರಬಂಧಕ ನೂರಾನ ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಎಲ್ಲ ಗ್ರಾಹಕರು ಎಲ್‍ಪಿಜಿ ಮರು ಪೂರಣದ ಸಿಲಿಂಡರ್‍ನ ಪೂರ್ಣ ಚಿಲ್ಲರೆ ಮಾರಾಟ ದರವನ್ನು ತಮ್ಮ ಬ್ಯಾಂಕ್ ಖಾತೆಯ ಮೂಲಕ ಪಡೆಯಲಿದ್ದಾರೆ. ಹಣ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಬಗ್ಗೆ ಗ್ರಾಹಕರು ದೃಢೀಕರಣದ ಎಸ್‍ಎಂಎಸ್ ಸ್ವೀಕರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಮರುಪೂರಣದ ಸಿಲಿಂಡರ್‍ಗಳನ್ನು ಗ್ರಾಹಕರ ಮನೆಗೆ ಮಾತ್ರವೆ ವಿತರಿಸಲಾಗುತ್ತದೆ. ಯಾರೊಬ್ಬರೂ ವಿತರಕರ ಬಳಿಗೆ ಬರುವ ಅಗತ್ಯವಿರುವುದಿಲ್ಲ. ಸಿಲಿಂಡರ್ ಸ್ವೀಕರಿಸಿದ ಬಳಿಕ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗೆ ಆಗಲೆ ಜಮಾ ಅಗಿರುವ ಆರ್‍ಎಸ್‍ಪಿ ಮೊತ್ತವನ್ನು ಪಾವತಿಸಬೇಕು ಎಂದು ನೂರಾನ ತಿಳಿಸಿದ್ದಾರೆ.
ಸಿಲಿಂಡರ್ ನ ನಗದು ಮೆಮೋದಲ್ಲಿಯೆ ಮರುಪೂರಣ ಸಿಲಿಂಡರ್ ಸ್ವೀಕೃತಿಯನ್ನು ಸೇರಿಸಲಾಗಿದೆ. ಗ್ರಾಹಕರು ಐವಿಆರ್‍ಎಸ್, ಎಸ್‍ಎಂಎಸ್ ಮೂಲಕ ಸಿಲಿಂಡರ್‍ಗಳನ್ನು ಬುಕ್ ಮಾಡಬಹುದು. ಅವರು ಯಾವುದೆ ದೂರವಾಣಿ ಸಂಖ್ಯೆಯಿಂದಲಾದರೂ ಐವಿಆರ್‍ಎಸ್ ಮೂಲಕ ಮತ್ತು ವಾಟ್ಸಪ್, ಪೇಟಿಎಂ, ಆನ್‍ಲೈನ್ ಇತ್ಯಾದಿಗಳ ಮೂಲಕವು ಸಿಲಿಂಡರ್ ಬುಕ್ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಉಜ್ವಲ ಉಚಿತ ಮರುಪೂರಣ ಸಿಲಿಂಡರ್ ಯೋಜನೆ ಅಡಿಯಲ್ಲಿ ಪ್ರಯೋಜನ ಪಡೆಯಲು ನಿಯಮಿತವಾದ ಗ್ರಾಹಕರಿಗೆ ಯಾವುದೆ ಹೆಚ್ಚುವರಿ ದಾಖಲೆ ಅಥವಾ ಪ್ರತಿಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಒಂದೊಮ್ಮೆ ಬ್ಯಾಂಕ್ ಖಾತೆ ಬದಲಾವಣೆ ಇತ್ಯಾದಿ ಇದ್ದಲ್ಲಿ, ಗ್ರಾಹಕರು ವಿತರಕರನ್ನು ಸಂಪರ್ಕಿಸಬೇಕು. ಅವರು ಗ್ರಾಹಕರಿಗೆ ಮಾರ್ಗದರ್ಶನ ಮಾಡುವುದಲ್ಲದೆ, ಅಗತ್ಯ ದಾಖಲೀಕರಣಕ್ಕೂ ಸಹಾಯ ಮಾಡಲಿದ್ದಾರೆ ಎಂದು ನೂರಾನ ತಿಳಿಸಿದ್ದಾರೆ.
ನಕಲಿ ಪ್ರತಿ ಯಂತ್ರಗಳ ಸಮಸ್ಯೆ ಇದ್ದಲ್ಲಿ ವಿತರಕರು ಡಿಜಿಟಲ್ ಅಥವಾ ತಮ್ಮ ಸ್ವಂತ ಕಾಪಿಯರ್ ಎಂಸಿ ಮೂಲಕ ನೆರವಾಗುತ್ತಾರೆ. ಯಾವುದೆ ಸ್ಪಷ್ಟೀಕರಣ, ನೆರವಿಗೆ, ನಿಮ್ಮ ವಿತರಕರನ್ನು ಸಂಪರ್ಕಿಸಿ. ಕಾಪಿಯರ್ ಎಂಸಿ ಮೂಲಕ ನೆರವಾಗುತ್ತಾರೆ. ಯಾವುದೆ ಸ್ಪಷ್ಟೀಕರಣ, ನೆರವಿಗೆ, ನಿಮ್ಮ ವಿತರಕರನ್ನು ಸಂಪರ್ಕಿಸಿ ಎಂದು ಅವರು ಹೇಳಿದ್ದಾರೆ.
ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಗ್ರಾಹಕರು ವಿತರಕರ ಬಳಿಗೆ ಖುದ್ದು ಹೋಗುವುದನ್ನು ತಪ್ಪಿಸಿ, ಫೋನ್ ಮೂಲಕ ಸಂಪರ್ಕಿಸಬೇಕು. ಯಾವುದೆ ವಿಶೇಷ ಸಂದರ್ಭಗಳಲ್ಲಿ ವಿತರಕರ ಶೋರೂಂಗೆ ಭೇಟಿ ನೀಡಬೇಕಾಗಿ ಬಂದಲ್ಲಿ, ಸಾಮಾಜಿಕ ಅಂತರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ನಿರ್ವಹಿಸಬೇಕು ಎಂದು ನೂರಾನ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.







