ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಬ್ರೆಝಿಲ್ ಅಧ್ಯಕ್ಷ ಬೋಲ್ಸನಾರೊ
ಹೊಸದಿಲ್ಲಿ, ಎ.9:ಕೊರೋನ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ತಯಾರಿಗೆ ಸಂಬಂಧಿಸಿದ ಕಚ್ಚಾವಸ್ತುಗಳನ್ನು ಪೂರೈಸಿದ ಭಾರತಕ್ಕೆ ಬ್ರೆಝಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಧನ್ಯವಾದ ಅರ್ಪಿಸಿದ್ದಾರೆ
ಬ್ರೆಝಿಲ್ ಅಧ್ಯಕ್ಷ ಬೋಲ್ಸನಾರೊ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ “ ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ಪಾದನೆಯನ್ನು ಮುಂದುವರಿಸಲು ನೀವು ಕಳುಹಿಸಿಕೊಟ್ಟಿರುವ ಕಚ್ಚಾವಸ್ತುಗಳನ್ನು ನಾವು ಶನಿವಾರ ಸ್ವೀಕರಿಸುತ್ತೇವೆ. ಇದರಿಂದಾಗಿ ಬ್ರೆಝಿಲ್ಗೆ ಕೋವಿಡ್ -19 ರೋಗಿಗಳಿಗೆ, ಮಲೇರಿಯ, ಚರ್ಮರೋಗ ಮತ್ತು ಸಂಧಿವಾತ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯ. ಬ್ರೆಝಿಲ್ ಜನರಿಗೆ ಇಂತಹ ಸಮಯೋಚಿತ ಸಹಾಯಕ್ಕಾಗಿ ಭಾರತಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಎಂದು ಹೇಳಿದ್ದಾರೆ
Next Story