Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಲರ್ಸ್ ಕನ್ನಡಕ್ಕೆ ಮರಳಿದ ಶನಿ, ಅನುಬಂಧ...

ಕಲರ್ಸ್ ಕನ್ನಡಕ್ಕೆ ಮರಳಿದ ಶನಿ, ಅನುಬಂಧ ಅವಾರ್ಡ್ಸ್

ವಾರ್ತಾಭಾರತಿವಾರ್ತಾಭಾರತಿ9 April 2020 6:00 PM IST
share
ಕಲರ್ಸ್ ಕನ್ನಡಕ್ಕೆ ಮರಳಿದ ಶನಿ, ಅನುಬಂಧ ಅವಾರ್ಡ್ಸ್

ಈಗ ಜಗತ್ತೇ ಒಂಥರಾ ಬಿಗ್‌ಬಾಸ್‌ ಮನೆಯಂತಾಗಿದೆ. ಎಲ್ಲರೂ ಮನೆಯೊಳಗೆ. ಹೊರಗೆ ಕಾಲಿಡುವಂತಿಲ್ಲ. ಸಿನಿಮಾ ಇಲ್ಲ. ಕ್ರಿಕೆಟ್ ಇಲ್ಲ, ಫುಟ್‌ಬಾಲ್, ಟೆನಿಸ್- ಯಾವುದೂ ಇಲ್ಲ. ಶಾಪಿಂಗ್ ಹೋಗುವಂತಿಲ್ಲ. ಈಗ ಎಲ್ಲರಿಗೂ ಇರುವ ಏಕೈಕ ಮನರಂಜನೆ ಎಂದರೆ ಟಿವಿ. ಅದರಲ್ಲೂ ಹೊಸ ಕಾರ್ಯಕ್ರಮಗಳಿಲ್ಲ.

ಇಷ್ಟು ದಿನಗಳ ಕಾಲ ಕನ್ನಡಿಗರನ್ನು ಪ್ರತಿದಿನವೂ ಮನರಂಜಿಸುತ್ತಿದ್ದ ಕಲರ್ಸ್ ಕನ್ನಡ ಈ ಸಂಕಷ್ಟದ ದಿನಗಳಲ್ಲಿ ಅವರ ಕೈಬಿಡುವುದೇ? ದೇಶವೇ ಲಾಕ್‌ಡೌನ್ ಆಗಿರುವ ಈ ಪರಿಸ್ಥಿತಿಯಲ್ಲಿ ಮನೆಯೊಳಗೆ ಕುಳಿತಿರುವ ಜನರನ್ನು ಮನರಂಜಿಸಲು ಕಲರ್ಸ್‌ ಕನ್ನಡ ತನ್ನ ಕೈಲಾದ ಪ್ರಯತ್ನ ಮಾಡುತ್ತಿದೆ. ತನ್ನ ಹಳೆ ಕಾರ್ಯಕ್ರಮಗಳ ಸಂಗ್ರಹಾಲಯವನ್ನು ತಡಕಾಡಿದೆ. ನೋಡಿದರೆ ಅಲ್ಲಿ ಅತ್ಯುತ್ತಮ ಮನರಂಜನಾ ಕಾರ್ಯಕ್ರಮಗಳ ಖಜಾನೆಯೇ ಇದೆ !

ಇದರ ಫಲವಾಗಿ ಈ ಶನಿವಾರ ಮತ್ತು ರವಿವಾರ (ಎ. 11 ಮತ್ತು 12) ಸಂಜೆ 6 ಗಂಟೆಯಿಂದ ಕಳೆದ ವರ್ಷದ ಅನುಬಂಧ ಅವಾರ್ಡ್ಸ್ ಮರು ಪ್ರಸಾರವಾಗಲಿದೆ.

ಅನುಬಂಧ ಅವಾರ್ಡ್ಸ್ ಕಲರ್ಸ್ ಕನ್ನಡದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದು. ವರ್ಷಕ್ಕೊಮ್ಮೆ ನಡೆಯುವ ಈ ಪ್ರಶಸ್ತಿ ಸಮಾರಂಭಕ್ಕಾಗಿ ಕನ್ನಡ ಟೆಲಿವಿಷನ್ ವೀಕ್ಷಕರೆಲ್ಲರೂ ಕಾದು ಕುಳಿತಿರುತ್ತಾರೆ. ಕಲರ್ಸ್ ಕನ್ನಡದ ಎಲ್ಲ ಕಲಾವಿದರು ಒಂದೆಡೆ ಸೇರಿ ಸಂಭ್ರಮಿಸುವ ಈ ಹಬ್ಬದಲ್ಲಿ ಕನ್ನಡ ಸಿನಿಮಾ ರಂಗದ ದಿಗ್ಗಜರೂ ಒಟ್ಟಾಗುತ್ತಾರೆ. ಪ್ರತಿ ವರ್ಷವೂ ಜನಪ್ರಿಯತೆಯಲ್ಲಿ ಮತ್ತು ರೇಟಿಂಗ್‌ನಲ್ಲಿ- ಎರಡರಲ್ಲೂ ಮುಂದಿರುವ ಅನುಬಂಧ ಅವಾರ್ಡ್ಸ್ ಮರುಪ್ರಸಾರ ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಜನರಿಗೆ ಮುದ ನೀಡುವುದರಲ್ಲಿ ಅನುಮಾನವಿಲ್ಲ.

ಕಲರ್ಸ್ ಕನ್ನಡದ ಪ್ರಖ್ಯಾತ ಮತ್ತು ಜನಪ್ರಿಯ ಧಾರಾವಾಹಿಗಳಲ್ಲಿ ಒಂದು “ಶನಿ.” ಕನ್ನಡ ಟೆಲಿವಿಷನ್‌ಗೆ ಪೌರಾಣಿಕ ಕತೆಯೊಂದನ್ನು ಈ ವೈಭವದೊಂದಿಗೆ ಪರಿಚಯಿಸಿದ ಇನ್ನೊಂದು ಧಾರಾವಾಹಿ ಇರಲಾರದು. ಅಭಿನಯ, ಗ್ರಾಫಿಕ್ಸ್, ಸಂಗೀತ ಮತ್ತಿತರ ವಿಚಾರಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಹಿಂದೆಂದೂ ಕಾಣದ ಆಯಾಮವನ್ನು ತಂದುಕೊಟ್ಟ ಧಾರಾವಾಹಿ ಶನಿ. ಇದು ಸೋಮವಾರದಿಂದ ಪ್ರತಿ ದಿನ ಸಂಜೆ ೫ ಗಂಟೆಗೆ ಪ್ರಸಾರವಾಗಲಿದೆ. ಮೊದಲ ಬಾರಿಗೆ ಪ್ರಸಾರವಾದಾಗ ನೋಡಿದವರಿಗೆ ಇನ್ನೊಮ್ಮೆ ನೋಡುವ ಅವಕಾಶ, ನೋಡದವರಿಗೆ ನೋಡುವ ಸದವಕಾಶ.

ಇದಲ್ಲದೆ ಈಗಿನ ಪರಿಸ್ಥಿತಿಗೆ ಸರಿಹೊಂದುವ ಕಾರ್ಯಕ್ರಮ ಯಾವುದಾದರೂ ಇದ್ದರೆ ಅದು “ಬಿಗ್‌ಬಾಸ್.” ಈ ಬಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಬಿಗ್‌ಬಾಸ್‌ ತುಂಬಾ ಕ್ಲೀನ್ ಆದ, ಮನರಂಜನಾತ್ಮಕವಾಗಿ ನಡೆದ ಮತ್ತು ಜಗಳವಿಲ್ಲದ ಬಿಗ್‌ಬಾಸ್ ಎಂದು ಜನಪ್ರಿಯವಾಗಿತ್ತು. ಲಾಕ್‌ಡೌನ್‌ನಲ್ಲಿ ಹದಿನೈದು ದಿನ ಮನೆಯೊಳಗೆ ಕುಳಿತಾಗಲೇ ಜನ ಹೈರಾಣಾಗಿದ್ದಾರೆ. ನಮ್ಮ ಜೊತೆ ನಮ್ಮ ಕುಟುಂಬದವರಿದ್ದಾರೆ, ಟಿವಿ ಇದೆ, ಪೇಪರ್ ಇದೆ, ಬೇಕಾದ ಊಟ ಇದೆ, ಪೆನ್ನು ಇದೆ, ಪೇಪರ್ ಇದೆ. ಆದರೆ ಇದ್ಯಾವುದೂ ಇಲ್ಲದೆ ಅಪರಿಚಿತ ವ್ಯಕ್ತಿಗಳ ಜೊತೆಗೆ ನೂರು ದಿನ ಕ್ಯಾಮರಾಗಳ ನಡುವೆ ಬದುಕುವುದನ್ನು ಒಮ್ಮೆ ಊಹಿಸಿಕೊಳ್ಳಿ! ಕಷ್ಟ ತಾನೇ? ಅಂಥ ಕಷ್ಟ ಪಟ್ಟು ಸೆಲೆಬ್ರಿಟಿಗಳು ಆ ಮನೆಯೊಳಗೆ ಹೇಗಿದ್ದರು ಎಂದು ತಿಳಿಯಲು ಇನ್ನೊಂದು ಅವಕಾಶವನ್ನು ಕಲರ್ಸ್ ಕನ್ನಡ ಒದಗಿಸಿಕೊಟ್ಟಿದೆ. ಪ್ರತಿ ಸಂಜೆ 6 ಗಂಟೆಯಿಂದ ಬಿಗ್‌ಬಾಸ್ ಪ್ರಸಾರವಾಗುತ್ತಿದೆ. ಈಗ ನೋಡಿದರೆ ಬಿಗ್‌ಬಾಸ್‌ನ ಹೊಸ ಆಯಾಮವೇ ನಮ್ಮ ಕಣ್ಣ ಮುಂದೆ ಬರಬಹುದು.

ಇಷ್ಟೇ ಅಲ್ಲ. ಲಾಕ್‌ಡೌನ್‌ನ ಮೂರನೇ ವಾರವೂ ಯಾವುದಾದರೂ ಮನರಂಜನಾ ಚಾನೆಲ್‌ನಲ್ಲಿ ಹೊಸ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿದೆ ಎಂದಾದರೆ ಬಹುಶಃ ಅದು ಕಲರ್ಸ್ ಕನ್ನಡದಲ್ಲಿಯೇ ಇರಬೇಕು. ಚಾನೆಲ್‌ನ ಜನಪ್ರಿಯ ಧಾರಾವಾಹಿಯ ಹೊಸ ಎಪಿಸೋಡ್‌ಗಳು ಇನ್ನು ಕೂಡಾ ಇವೆ ಎಂಬುದು ಗಮನಾರ್ಹ ವಿಷಯ. ನಾಯಕಿ ಗೀತಾ ಮತ್ತು ನಾಯಕ ವಿಜಯ್ ಮಧ್ಯೆ ನಡೆಯುವ ಜಟಾಪಟಿ ಕುತೂಹಲಕಾರಿ ಘಟ್ಟದಲ್ಲಿದೆ. ಗೀತಾ ಧಾರಾವಾಹಿಯ ಹೊಸ ಎಪಿಸೋಡ್‌ಗಳು ಅದರ ಒರಿಜಿನಲ್ ಸ್ಲಾಟ್‌ನಲ್ಲಿ ಅಂದರೆ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಒಟ್ಟಿನಲ್ಲಿ ಲಾಕ್‌ಡೌನ್ ಇರಲಿ, ಇಲ್ಲದಿರಲಿ- ಕನ್ನಡಿಗರಿಗೆ ಮನರಂಜನೆ ಒದಗಿಸುವುದರಲ್ಲಿ ಕಲರ್ಸ್ ಕನ್ನಡ ಸದಾ ಮುಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X