Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ‘ಟೀಂ ಬಿ ಹ್ಯೂಮನ್’ನಿಂದ 600...

‘ಟೀಂ ಬಿ ಹ್ಯೂಮನ್’ನಿಂದ 600 ಕುಟುಂಬಗಳಿಗೆ ರೇಶನ್ ಕಿಟ್ ವಿತರಣೆ

ವಾರ್ತಾಭಾರತಿವಾರ್ತಾಭಾರತಿ9 April 2020 7:44 PM IST
share
‘ಟೀಂ ಬಿ ಹ್ಯೂಮನ್’ನಿಂದ 600 ಕುಟುಂಬಗಳಿಗೆ ರೇಶನ್ ಕಿಟ್ ವಿತರಣೆ

ಮಂಗಳೂರು, ಎ.9: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಸರಕಾರ ವಿಧಿಸಿರುವ ಲಾಕ್‌ಡೌನ್‌ನಿಂದ ಕಂಗಾಲಾದ ವಲಸೆ ಕಾರ್ಮಿಕರ ಹೊಟ್ಟೆ ತಣಿಸುವ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ಕೈಗೆತ್ತಿಕೊಂಡಿರುವ ಮಂಗಳೂರಿನ ಟೀಂ ಬಿ ಹ್ಯೂಮನ್ ಸಮಾಜ ಸೇವಾ ಸಂಸ್ಥೆಯು ಇದೀಗ ಎಲ್ಲ ಜಾತಿ, ಧರ್ಮಗಳ ದಿನಕೂಲಿ ಕಾರ್ಮಿಕರು ಮತ್ತು ಬಡವರ ಮನೆ ಬಾಗಿಲಿಗೆ ರೇಶನ್ ಕಿಟ್ ತಲಪಿಸುವ ಯೋಜನೆಯನ್ನು ಮುಂದುವರಿಸಿದೆ.

ಟೀಂ ಬಿ ಹ್ಯೂಮನ್‌ನ ಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್ ಅವರ ನೇತೃತ್ವದಲ್ಲಿ ಸದಸ್ಯರಾದ ಅಲ್ತಾಫ್, ನವಾಝ್, ಶಮೀಮ್, ಅಶ್ರಫ್ ಐನಾ ಗ್ರೂಪ್, ಬಾಷಾ, ಪ್ರದೀಪ್ ಅವರನ್ನೊಳಗೊಂಡ ತಂಡವು ಈ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಕಾವೂರು, ಬಜ್ಪೆ, ಕಿನ್ನಿಗೋಳಿ, ಪಕ್ಷಿಕೆರೆ, ಬೈಕಂಪಾಡಿ ಪರಿಸರದ 63 ಕುಟುಂಬಗಳಿಗೆ ಕಿಟ್ ತಲುಪಿಸಲಾಗಿದ್ದು, ಬಜ್ಪೆಯ ಇಮ್ತಿಯಾಝ್ ಗೋಲ್ಡನ್ ಮತ್ತು ಪಾಟ್ರಿಸಿಯಾ ಡಿಸೋಜ ತಂಡದಲ್ಲಿದ್ದು ಸಹಕರಿಸಿದ್ದಾರೆ.

ಶಕ್ತಿನಗರ, ಕುಲಶೇಖರ, ಪದವು, ವಾಮಂಜೂರು, ಅಡ್ಡೂರು, ಪುಂಚಮೆ, ಬಡಕಬೈಲು, ಕರಿಯಂಗಳ ಮತ್ತು ಕಲ್ಲಾಯಿ ಪರಿಸರದ 118 ಕುಟುಂಬಗಳಿಗೆ ಕಿಟ್ ನೀಡಲಾಗಿದ್ದು, ಹಿದಾಯ ಫೌಂಡೇಶನ್‌ನ ಹಕೀಮ್ ಕಲ್ಲಾಯಿ, ಕರಿಯಂಗಳ ಗ್ರಾಪಂ ಸದಸ್ಯ ನವಾಝ್ ಮತ್ತು ಬಡಕಬೈಲು ಎಂಜೆಎಂ ಅಧ್ಯಕ್ಷ ಬಶೀರ್ ತಂಡದಲ್ಲಿದ್ದು ಸಹಕರಿಸಿದ್ದಾರೆ.

ದೇರಳಕಟ್ಟೆ, ಅಳೇಕಲ, ಪಾನೇಲ, ಮುಡಿಪು, ಬೋಳಿಯಾರು, ಕುತ್ತಾರು ಪದವು ಪರಿಸರದ 105 ಮನೆಗಳಿಗೆ ಕಿಟ್ ವಿತರಿಸಲಾಗಿದ್ದು, ಸಾಮಾಜಿಕ ಕಾರ್ಯಕರ್ತ ಸಿದ್ದೀಕ್ ದೇರಳಕಟ್ಟೆ ತಂಡದಲ್ಲಿದ್ದು ಸಹಕರಿಸಿದ್ದಾರೆ.

ಬಿ.ಸಿ.ರೋಡ್, ಗೂಡಿನಬಳಿ, ಮೆಲ್ಕಾರ್, ಲೊರೆಟ್ಟೊ ಪದವು ಮತ್ತು ಬರೈಕಾಡು ಪರಿಸರದ 125 ಕುಟುಂಬಗಳಿಗೆ ಕಿಟ್ ತಲಪಿಸಲಾಗಿದ್ದು, ಬಂಟ್ವಾಳದ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಮತ್ತು ಎಸ್ಕೆಎಸೆಸ್ಸೆಫ್ ಸಂಘಟನೆಯ ಸಿರಾಜ್ ಫೈಝಿ ತಂಡದಲ್ಲಿದ್ದು ಸಹಕರಿಸಿದ್ದಾರೆ.

ಕಂಕನಾಡಿ, ಸೂಟರ್‌ಪೇಟೆ, ಜೆಪ್ಪು, ಮಜಿಲಾ, ಬಲ್ಮಠ, ಕದ್ರಿ, ಪಡೀಲ್ ಮತ್ತು ಉಜ್ಜೋಡಿ ಪರಿಸರದ 32 ಹಾಗೂ ಅಳಕೆ, ಸುಲ್ತಾನ್ ಬತ್ತೇರಿ, ಉರ್ವ, ಬಂಗ್ರ ಕೂಳೂರು ಮತ್ತು ಕಾವೂರು ಪರಿಸರದಲ್ಲಿ 85 ಕುಟುಂಬಗಳಿಗೆ ಕಿಟ್ ನೀಡಲಾಗಿದೆ.

ಬಂದರ್, ಅತ್ತಾವರ, ಪಾಂಡೇಶ್ವರ, ಬೋಳಾರ ಮತ್ತು ತಣ್ಣೀರುಬಾವಿ ಪರಿಸರದ 68 ಕುಟುಂಬಗಳಿಗೆ ಕಿಟ್ ನೀಡಲಾಗಿದ್ದು, ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್ ಮತ್ತು ಝಿಯಾಉದ್ದೀನ್ ಸಹಕರಿಸಿದ್ದಾರೆ.

2ನೆ ಹಂತದಲ್ಲಿ 900 ರೇಶನ್ ಕಿಟ್‌ಗಳು ಹಾಗೂ 3ನೇ ಹಂತದಲ್ಲಿ 1000 ರಮಝಾನ್ ಕಿಟ್‌ಗಳನ್ನು ನೀಡುವ ಯೋಜನೆಯಿದ್ದು, ದೇಣಿಗೆದಾರರು ಮತ್ತು ಪ್ರಾಯೋಜಕರ ಪ್ರೋತ್ಸಾಹವನ್ನು ಸಂಸ್ಥೆಯು ನಿರೀಕ್ಷಿಸುತ್ತಿದೆ ಎಂದು ಟೀಂ ಬಿ ಹ್ಯೂಮನ್‌ನ ಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X