ಬಾರ್ಗೆ ನುಗ್ಗಿ ಮದ್ಯ ಕಳವು
ಶಿರ್ವ, ಎ.9: ಬಂಟಕಲ್ ಶಕ್ತಿ ಬಾರ್ಗೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಮದ್ಯ ಕಳವು ಮಾಡಿರುವ ಘಟನೆ ಎ.8ರಂದು ರಾತ್ರಿ ವೇಳೆ ನಡೆದಿದೆ.
ಬಾರ್ನ ಹಿಂಬದಿಯ ಮಾಡಿನ ಹೆಂಚನ್ನು ತೆಗೆದು ಒಳನುಗ್ಗಿದ ಕಳ್ಳರು, ಹಿಂದುಗಡೆ ಇರುವ ಸ್ಟೋರ್ ರೂಮ್ನಲ್ಲಿದ್ದ 6 ಬಾಕ್ಸ್ನಲ್ಲಿದ್ದ ವಿವಿಧ ಕಂಪೆನಿಯ ಮದ್ಯದ ಬಾಟಲ್ಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 15,200ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story