ಲಾಕ್ಡೌನ್ನಿಂದಾಗಿ ತವರಿನಲ್ಲಿ ಉಳಿದ ಪತ್ನಿ: ಬೇಸರದಿಂದ ಪತಿ ಆತ್ಮಹತ್ಯೆ
ಹೊಸದಿಲ್ಲಿ, ಎ.7: ಲಾಕ್ಡೌನ್ನಿಂದಾಗಿ ತನ್ನ ಪತ್ನಿ ತವರಿನಲ್ಲೇ ಸಿಕ್ಕಿಹಾಕಿಕೊಂಡಿದ್ದರಿಂದ, ವಿರಹವೇದನೆಗೊಳಗಾದ ಯುವಕನೊಬ್ಬ ಮನೆಯ ಛಾವಣಿಯ ಸೀಲಿಂಗ್ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಿಲ್ಲಿಯ ರಾಧಾಕುಂಡ್ ಪ್ರದೇಶದಲ್ಲಿ ಬುಧವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಾತನನ್ನು 32 ವರ್ಷ ವಯಸ್ಸಿನ ರಾಕೇಶ್ ಸೋನಿ ಎಂದು ಗುರುತಿಸಲಾಗಿದೆ.
ರಾಕೇಶ್ ಸೋನಿಯ ಪತ್ನಿ ತವರು ಮನೆಗೆ ತೆರಳಿದ್ದರು. ಆದರೆ ಲಾಕ್ಡೌನ್ನಿಂದಾಗಿ ಮನೆಗೆ ವಾಪಸ್ ಬರಲಾಗದೆ ಅಲ್ಲೇ ಉಳಿದುಕೊಂಡಿದ್ದಳು. ಆಕೆಯ ಅನುಪಸ್ಥಿತಿಯನ್ನು ಸಹಿಸಲಾಗದೆ ರಾಕೇಶ್ ನೇಣುಬಿಗಿದು ಸಾವಿಗೆ ಶರಣಾಗಿದ್ದಾನೆಂದು ಇನ್ಸ್ಪೆಕ್ಟರ್ ಅಲೋಕ್ ರಾವ್ ತಿಳಿಸಿದ್ದಾರೆ.
Next Story