ಉಡುಪಿ: ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕೋವಿಡ್-19 ಜಾಗೃತಿ

ಉಡುಪಿ, ಎ.10: ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಪಾಲನಾ ಸಂಸ್ಥೆಗಳಲ್ಲಿ ಕೋವಿಡ್-19ರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಗುರುವಾರ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನ ಟ್ರಸ್ಟ್ ಹಾಗೂ ಕಲ್ಯಾಣಪುರದ ಪ್ಲಾನೆಟ್ ಮಾಸ್ ಫೌಂಡೇಷನ್‌ನಲ್ಲಿ ನಡೆಯಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ, ಕೋವಿಡ್-19 ಕುರಿತಂತೆ, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ತೆಗೆದು ಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳಿಗೆ ಶೀತ, ಕೆಮ್ಮು, ಜ್ವರ ಇತ್ಯಾದಿ ಲಕ್ಷಣಗಳು ಇದ್ದಲ್ಲಿ ತಕ್ಷಣ ವೈದ್ಯಾಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಲಾಯಿತು.
ಅಲ್ಲದೆ ಮಕ್ಕಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಲ್ಲೂ ನಿಗಾ ವಹಿಸಬೇಕು. ಹಾಗೂ ಸಂಸ್ಥೆಯ ಸುತ್ತಮುತ್ತ ವಾರಕ್ಕೊಮ್ಮೆ ಕ್ರಿಮಿನಾಶಕವನ್ನು ಸಿಂಪಡಿಸುವ ಮೂಲಕ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಯಿತು
ಅಲ್ಲದೆ ಮಕ್ಕಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಲ್ಲೂ ನಿಗಾ ವಹಿಸಬೇಕು. ಹಾಗೂ ಸಂಸ್ಥೆಯ ಸುತ್ತಮುತ್ತ ವಾರಕ್ಕೊಮ್ಮೆ ಕ್ರಿಮಿನಾಶಕವನ್ನು ಸಿಂಪಡಿಸುವ ಮೂಲಕ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಯಿತು ಔಟ್‌ರೀಚ್ ವರ್ಕರ್ ಯೋಗೀಶ್, ಬಾಲನಿಕೇತನ ಸಂಸ್ಥೆಯ ವಾರ್ಡನ್ ಶಕುಂತಲಾ, ಪ್ಲಾನೆಟ್ ಮಾಸ್ ಸಂಸ್ಥೆಯ ವಾರ್ಡನ್ ಗೀತಾ ಉಪಸ್ಥಿತರಿದ್ದರು.







