ಇನೋಳಿ ಜಮಾಅತ್‌ನಿಂದ ಪಡಿತರ ಕಿಟ್ ವಿತರಣೆ
ಕೊಣಾಜೆ: ಪಾವೂರು ಗ್ರಾಮದ ಇನೋಳಿ ಜಾಮಿಯಾ ಅಲ್-ಮುಬಾರಕ್ ಜುಮಾ ಮಸೀದಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಜಮಾಅತ್‌ನ ಮನೆಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಇನೋಳಿ ಎಸ್ಕೆಎಸ್ಸೆಸ್ಸೆಫ್, ಎಸ್ಸೆಸ್ಸೆಫ್, ಮಿಸ್ಬಾಹುಲ್ ಹುದಾ ಯಂಗ್‌ಮೆನ್ಸ್ ಅಸೋಸಿಯೇಶನ್, ದಾನಿ ಕೆಎಚ್‌ಕೆ ಹಾಜಿ ಇವರ ಸಹಕಾರದಲ್ಲಿ ಲಾಕ್‌ಡೌನ್‌ನಿಂದಾಗಿ ಜನರು ಮನೆಯಿಂದ ಹೊರಬರುವುದನ್ನು ತಡೆಯುವ ನಿಟ್ಟಿನಲ್ಲಿ ಜಮಾಅತರ ಮನೆಗಳಿಗೇ ಆಹಾರ ಸಾಮಗ್ರಿಗಳನ್ನು ತಲುಪಿಸಲಾಯಿತು ಎಂದು ಹೇಳಲಾಗಿದೆ.
ಈ ಸಂದರ್ಭ ಇನೋಳಿ ಜಮಾಅತ್ ನ ಅಬ್ದುಲ್ ಖಾದರ್, ಟಿ.ಎಚ್.ಅಬ್ಬಾಸ್, ಮಹಮ್ಮದ್ ಮೋನು ಚಕ್ಕರ್, ಹೈದರ್ ಅಲಿ ಸಖಾಫಿ, ಅಕ್ರಂ ಬಿ.ಸೈಟ್, ಅಶ್ರಫ್ ಮುಟ್ಟಿಂಜ, ಜಮಾಅತ್ ಗ್ರೂಪ್ ಪರವಾಗಿ ಇಕ್ಬಾಲ್ ಐ.ಕೆ., ಮಹಮ್ಮದ್ ಅನ್ಸಾರ್, ನಿಝಾಮ್ ವಗ್ಗ, ಲತೀಫ್ ಕಲ್ಲಕಂಡ, ಎಸ್ಸೆಸ್ಸೆಫ್ ಪರವಾಗಿ ಶಬೀರ್ ಎ.ಸೈಟ್, ಲತೀಫ್ ನಂದಾವರ, ಅಶ್ರಫ್ ಪಾಂಚರಪ್ಪಾಲ್, ಎಸ್ಕೆಎಸ್ಸೆಸ್ಸೆಫ್ ಪರವಾಗಿ ಶರೀಫ್ ಮೈಕೋಡಿ, ಇಸ್ಮಾಯಿಲ್ ವಗ್ಗ, ಮಿಸ್ಬಾಹುಲ್ ಹುದಾ ಯಂಗ್‌ಮೆನ್ಸ್ ಅಸೋಸಿಯೇಶನ್ ಪರವಾಗಿ ಖಾದರ್ ವಗ್ಗ, ಆಸಿಫ್ ಪೊರ್ಸೋಟ, ಕರೀಮ್ ಐ.ಕೆ., ಸಿದ್ದೀಕ್ ಪಾಂಚರಪ್ಪಾಲ್ ಇನ್ನಿತರರು ಉಪಸ್ಥಿತರಿದ್ದರು





