ಮೋದಿಯನ್ನು ಹೊಗಳುವ ಸಲುವಾಗಿಯೇ ಇಲ್ಲದ ಸಂಶೋಧನೆಯನ್ನು ಹೆಸರಿಸಿದ ಎಬಿಪಿ ಚಾನಲ್ !
ಹೊಸದಿಲ್ಲಿ : ಪ್ರಧಾನಿ ಮೋದಿಯನ್ನು ಹೊಗಳುವ ಸಲುವಾಗಿಯೇ ಎಬಿಪಿ ನ್ಯೂಸ್ ಚಾನಲ್ ಇಲ್ಲದ ಸಂಶೋಧನೆಯನ್ನು ಹೆಸರಿಸಿದ ಅಂಶ ಬೆಳಕಿಗೆ ಬಂದಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸದಿದ್ದರೆ ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ 8.20 ಲಕ್ಷ ಆಗುತ್ತಿತ್ತು ಎನ್ನುವ ಅಂಶ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ. ಇದೀಗ ದೇಶದಲ್ಲಿ ಧನಾತ್ಮಕ ಪ್ರಕರಣಗಳ ಸಂಖ್ಯೆ 6412ಕ್ಕೆ ಸೀಮಿತವಾಗಿದೆ ಎಂದು ಎಬಿಪಿ ನ್ಯೂಸ್ ಶುಕ್ರವಾರ ಪ್ರಸಾರ ಮಾಡಿತ್ತು.
ಲಾಕ್ಡೌನ್ ಇಲ್ಲದಿದ್ದರೆ ಭಾರತದಲ್ಲಿ ಕೋವಿಡ್-19 ಸಾವಿನ ಸಂಖ್ಯೆ ಇಟೆಲಿ ಹಾಗೂ ಚೀನಾಕ್ಕಿಂತ ಅಧಿಕವಾಗುತ್ತಿತ್ತು ಎಂದು ಹೇಳಿತ್ತು. ಇಟೆಲಿಯಲ್ಲಿ ಈಗಾಗಲೇ 18279 ಮಂದಿ ಮತ್ತು ಚೀನಾದಲ್ಲಿ 3336 ಮಂದಿ ಮೃಪಟ್ಟಿದ್ದಾರೆ. ಆದರೆ ಅಧಿಕೃತ ಮೂಲಗಳ ಪ್ರಕಾರ ಭಾರತದಲ್ಲಿ ಸೋಂಕಿನಿಂದ ಮೃತಪಟ್ಟವರು 206.
ಜತೆಗೆ ಈ ವರದಿಯಲ್ಲಿ ಐಸಿಎಂಆರ್ ಹೇಗೆ ಇದನ್ನು ಅಂದಾಜಿಸಿದೆ ಎಂಬ ಸೂತ್ರವನ್ನೂ ವಿವರಿಸಲಾಗಿತ್ತು. ಆದರೆ ವಾಸ್ತವವಾಗಿ ಐಸಿಎಂಆರ್ ಇಂಥ ಯಾವ ಸಂಶೋಧನೆಯನ್ನೂ ಪ್ರಕಟಿಸಿಲ್ಲ. ಇಂಥ ಯಾವ ಸಂಶೋಧನೆಯೂ ಇಲ್ಲ ಎನ್ನುವುದನ್ನು ಆರೋಗ್ಯ ಸಚಿವಾಲಯ ಕೂಡಾ ತನ್ನ ದೈನಿಕ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿತ್ತು. ಇಂಥ ಯಾವ ಸಂಶೋಧನೆಯೂ ಇಲ್ಲ ಎಂದು ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ.
ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಅವರ ಪತ್ರಿಕಾಗೋಷ್ಠಿಯ ವೀಡಿಯೊ
Corona infections would have crossed 8.20 lakh in India by 15 April if there was no lockdown here: ICMR Research.
— Amit Malviya (@amitmalviya) April 10, 2020
The number of Corona positive patients is around 6,400 as on 10 April. #IndiaFightsCorona pic.twitter.com/GGjq4UE7UT