ಲಾಕ್‌ಡೌನ್: ಮನೆಯಲ್ಲಿಯೇ ಈಸ್ಟರ್ ಹಬ್ಬ ಆಚರಣೆ
ಉಡುಪಿ, ಎ.11: ಯೇಸು ಕ್ರಿಸ್ತರು ಶಿಲುಬೆಗೇರಿ ಮೂರನೇ ದಿನ ಪುನರು ತ್ಥಾನಗೊಂಡ ಈಸ್ಟರ್ ಹಬ್ಬವನ್ನು ಕ್ರೈಸ್ತರು ಜಿಲ್ಲೆಯಾದ್ಯಂತ ಲಾಕ್‌ಡೌನ್ ಹಿನ್ನಲೆ ಯಲ್ಲಿ ಮನೆಯಲ್ಲಿಯೇ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ತಮ್ಮ ನಿವಾಸದ ಖಾಸಗಿ ಪ್ರಾರ್ಥನಾಲಯದಲ್ಲಿ ಶನಿವಾರ ರಾತ್ರಿ ಪಾಸ್ಕ ಜಾಗರಣೆ(ಈಸ್ಟರ್ ವಿಜಿಲ್) ಪ್ರಯುಕ್ತ ಬಲಿಪೂಜೆಯನ್ನು ನೇರೆವೇರಿಸಿ ದರು. ಧರ್ಮಾಧ್ಯಕ್ಷರ ಬಲಿಪೂಜೆಯನ್ನು ಲೈವ್ ಸ್ಟ್ರೀಮಿಂಗ್ ಮೂಲಕ ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಕ್ರೈಸ್ತ ಭಾಂಧವರು ಮನೆ ಯಲ್ಲಿಯೇ ಹೊಸ ಬಟ್ಟೆ ತೊಟ್ಟು, ಈಸ್ಟರ್ ವಿಜಿಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಪ್ರಯುಕ್ತ ಹೊಸ ಬೆಂಕಿ ಆಶೀರ್ವಚನ, ಈಸ್ಟರ್ ಕ್ಯಾಂಡಲ್ ಪ್ರತಿಷ್ಠಾಪನೆ, ಹೊಸ ನೀರಿನ ಆಶೀರ್ವಚನ ವಿಧಿನಗಳು ಸಾಂಕೇತಿಕವಾಗಿ ಜರಗಿತು. ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಧರ್ಮಾ ಧ್ಯಕ್ಷರು ತ್ಮು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Next Story





