ಎ.15ರಿಂದ ನಾಡದೋಣಿ ಮೀನುಗಾರಿಕೆ ಆರಂಭ: ಯಶ್ಪಾಲ್
ಉಡುಪಿ, ಎ.11: ಮೀನು ಕರಾವಳಿ ಭಾಗದ ಅಗತ್ಯವಾದ ಆಹಾರವಸ್ತು ವಾಗಿದ್ದು, ಹಾಗಾಗಿ ನಾಡ ದೋಣಿಗಳ ಮೂಲಕ ಮೀನುಗಾರಿಕೆಗೆ ರಾಜ್ಯ ಸರಕಾರ ಅವಕಾಶ ನೀಡಿದೆ. ಅದರಂತೆ ಎ.15ರ ಬೆಳಗಿನ ಜಾವದಿಂದ ಮೀನು ಗಾರಿಕೆ ಆರಂಭವಾಗಲಿದೆ ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿಯಲ್ಲಿಂದು ಈ ಬಗ್ಗೆ ಮಾಧ್ಯಮದವರಿಗೆ ಪ್ರತ್ರಿಯಿಸಿದ ಅವರು, ಬಂದರು ಪ್ರದೇಶದ ಒಳಗೆ ಮೀನುಗಾರಿಕಾ ಚಟುವಟಿಕೆಗೆ ಅವಕಾಶ ಇರುವುದಿಲ್ಲ. ಐವರು ಮೀನುಗಾರರ ಮೂಲಕ ನಾಡದೋಣಿಗಳಲ್ಲಿ ಮೀನು ಹಿಡಿಯಬಹುದಾಗಿದೆ. ಮುಖ್ಯಮಂತ್ರಿಗಳು ಕೂಡ ಈ ಮಾತನ್ನೇ ಹೇಳಿದ್ದಾರೆ ಎಂದರು.
ಸಾಂಪ್ರದಾಯಿಕ ಮೀನುಗಾರಿಕೆಗೆ ಕೆಲವೊಂದು ನಿಯಮಾವಳಿ ರಚಿಸ ಲಾಗಿದೆ. ಹೆಜಮಾಡಿಯಿಂದ ಗಂಗೊಳ್ಳಿಯವರೆಗೆ ಕೆಲವೊಂದು ಸ್ಥಳ ನಿಗದಿ ಮಾಡಿದ್ದೇವೆ. ಸರಕಾರ ಸೂಚನೆಯಂತೆ ಮೀನುಗಾರಿಕೆ ನಡೆಸಲಾಗುವುದು. ಯಾವ ಮಟ್ಟದಲ್ಲಿ ಮೀನು ಲಭ್ಯವಾಗುತ್ತದೆ ಎಂಬುದು ಗೊತ್ತಿಲ್ಲ. ಮೀನು ಮಾರಾಟಕ್ಕೆ ಕೆಲವೊಂದು ಮಾರುಕಟ್ಟೆ ನಿಗದಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.
Next Story





