ಇಸ್ಪೀಟು ಜುಗಾರಿ: ಇಬ್ಬರ ಬಂಧನ
ಕೋಟ, ಎ.11: ಮಣೂರು ಗ್ರಾಮದ ಹೊನ್ನೇರಿಯಲ್ಲಿರುವ ಶ್ರೀನಾಗಬನದ ಹತ್ತಿರ ಎ.10ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಸಂತೋಷ(41), ಉಮೇಶ(45) ಎಂಬವರನ್ನು ಕೋಟ ಪೊಲೀಸರು ಬಂಧಿಸಿದ್ದು, ಅರುಣ್, ಸುದರ್ಶನ, ಸುಭಾಶ್, ರವಿಕಿರಣ, ಕರುಣಾ, ಚಂದ್ರಶೇಖರ ಶೆಟ್ಟಿ ಎಂಬವರು ಪರಾರಿಯಾಗಿದ್ದಾರೆ.
ಬಂಧಿತರಿಂದ 2300 ರೂ. ನಗದು, ಏಳು ಮೊಬೈಲ್, ಒಂದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 66,300 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





