ಯುವತಿ ಆತ್ಮಹತ್ಯೆ
ಕಾಪು, ಎ.11: ವೈಯಕ್ತಿಕ ಕಾರಣದಿಂದ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪುರ ಎಂಬಲ್ಲಿ ಎ.11ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಮಣಿಪುರ ನಿವಾಸಿ ಅಬ್ದುಲ್ ರಝಾಕ್ ಎಂಬವರ ಮಗಳು ಫರ್ಝಾನಾ (23) ಎಂದು ಗುರುತಿಸಲಾಗಿದೆ. ಇವರು 4 ವರ್ಷಗಳ ಹಿಂದೆ ಉಡುಪಿ ದೊಡ್ಡಣಗುಡ್ಡೆಯ ಜುನೈದ್ ಎಂಬವರನ್ನು ವಿವಾಹವಾಗಿದ್ದು ಎರಡು ವರ್ಷಗಳ ಹಿಂದೆ ಗಂಡನಿಂದ ವಿಚ್ಚೇದನ ಪಡೆದು ಬಳಿಕ ತಾಯಿ ಮನೆಯಲ್ಲಿ ವಾಸವಾಗಿದ್ದರು.
ಮನೆಯಲ್ಲಿ ಯಾರು ಇಲ್ಲದ ವೇಳೆ ಫರ್ಝಾನ ತನ್ನ ರೂಮಿನ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ವಿವಾಹ ವಿಚ್ಚೇದನದ ಬಳಿಕ ಮನೆಯಲ್ಲಿಯೇ ಇದ್ದು, ಆಕೆ ಅದೇ ಕಾರಣಕ್ಕೆ ಅಥವಾ ಬೇರೆ ಯಾವುದೋ ವಿಷಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





