ಭಾರತದಿಂದ ಬ್ರಿಟನ್‌ಗೆ 30 ಲಕ್ಷ ಪ್ಯಾರಾಸಿಟಮಾಲ್ ಪೊಟ್ಟಣಗಳ ರಫ್ತು

ಲಂಡನ್, ಎ. 11: ಭಾರತದಿಂದ 30 ಲಕ್ಷ ಪ್ಯಾರಾಸಿಟಮಾಲ್ ಪೊಟ್ಟಣಗಳ ಮೊದಲ ಕಂತೆ ರವಿವಾರದ ವೇಳೆಗೆ ಬ್ರಿಟನ್ ತಲುಪಲಿದೆ. ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಈ ಔಷಧಿಯ ರಫ್ತಿನ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಭಾರತ ತೆರವುಗೊಳಿಸಿದ ಬಳಿಕ ಈ ಔಷಧಿಯ ರಫ್ತು ಸಾಧ್ಯವಾಗಿದೆ. ಈ ಮಹತ್ವದ ಸರಕಿನ ರಫ್ತಿಗೆ ಅನುಮತಿ ನೀಡಿರುವುದಕ್ಕಾಗಿ ಬ್ರಿಟನ್ ಭಾರತ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದೆ.
ಈ ಅಭೂತಪೂರ್ವ ಜಾಗತಿಕ ಬಿಕ್ಕಟ್ಟಿನ ನಡುವೆ ಉಭಯ ದೇಶಗಳು ಬೆಳೆಸಿಕೊಂಡಿರುವ ಪರಸ್ಪರ ಸಹಕಾರ ಮನೋಭಾವದ ದ್ಯೋತಕ ಈ ಔಷಧಿ ರಫ್ತಾಗಿದೆ ಎಂದು ವಿದೇಶ ಮತ್ತು ಕಾಮನ್‌ವೆಲ್ತ್ ಕಚೇರಿಯಲ್ಲಿ ದಕ್ಷಿಣ ಏಶ್ಯ ಮತ್ತು ಕಾಮನ್‌ವೆಲ್ತ್ ವಿಭಾಗದ ಸಹಾಯಕ ಸಚಿವ ತಾರಿಖ್ ಅಹ್ಮದ್ ಶುಕ್ರವಾರ ಹೇಳಿದ್ದಾರೆ.
Next Story





