ಸ್ಪೇನ್: ಒಂದು ದಿನದಲ್ಲಿ 510 ಸಾವು
ಇಳಿಯುತ್ತಿರುವ ಸಾವಿನ ಸಂಖ್ಯೆ

ಸಾಂದರ್ಭಿಕ ಚಿತ್ರ
ಮ್ಯಾಡ್ರಿಡ್ (ಸ್ಪೇನ್), ಎ. 11: ಸ್ಪೇನ್ನಲ್ಲಿ ಸತತ ಮೂರನೇ ದಿನವಾದ ಶನಿವಾರವೂ ಕೊರೋನವೈರಸ್ ಸಾವಿನ ದೈನಂದಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಸರಕಾರ ತಿಳಿಸಿದೆ. ಶನಿವಾರ ದೇಶದಲ್ಲಿ 510 ಮಂದಿ ಮೃತಪಟ್ಟಿದ್ದಾರೆ.
ಇದು ಸ್ಪೇನ್ನಲ್ಲಿ ಮಾರ್ಚ್ 23ರ ಬಳಿಕ ವರದಿಯಾಗಿರುವ ಕನಿಷ್ಠ ಸಾವಿನ ಸಂಖ್ಯೆಯಾಗಿದೆ. ಇದರೊಂದಿಗೆ ದೇಶದಲ್ಲಿ ಈವರೆಗೆ ಸಂಭವಿಸಿರುವ ಸಾವಿನ ಒಟ್ಟು ಸಂಖ್ಯೆ 16,353ಕ್ಕೆ ಏರಿದೆ.
ಕಳೆದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 4,800 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,61,852ಕ್ಕೆ ಏರಿದೆ. ಸ್ಪೇನ್ ಮಾರ್ಚ್ 14ರಿಂದ ಬೀಗಮುದ್ರೆಯಲ್ಲಿದೆ. ಎಪ್ರಿಲ್ 25ರವರೆಗೂ ಅದು ಮುಂದುವರಿಯುತ್ತದೆ.
Next Story





