ಉಡುಪಿ : ಮೀನುಗಾರಿಕೆಗೆ ವಿನಾಯಿತಿ ನೀಡಿದ ಸರಕಾರ
ದೇಶಾದ್ಯಂತ ಲಾಕ್ ಡೌನ್

ಉಡುಪಿ : ಕೊರೋನ ವೈರಸ್ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಮೀನುಗಾರಿಕೆಗೆ ಸರಕಾರ ವಿನಾಯಿತಿ ನೀಡಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
ರಾಜ್ಯಾದ್ಯಂತ ಹದಿನಾಲ್ಕು ಸಾವಿರ ನಾಡ ದೋಣಿಗಳು ಕಸುಬು ಆರಂಭಿಸಲಿದೆ. ಮೀನುಗಾರಿಕೆ ನಡೆಸಿದ ದೋಣಿಗಳು ಬಂದರಿಗೆ ಬರುವಂತಿಲ್ಲ, ಮನೆ ಮನೆಗೆ ಭೇಟಿ ಕೊಟ್ಟು ಮೀನನ್ನು ಗ್ರಾಹಕರಿಗೆ ಮಾರಾಟ ಮಾಡಬೇಕು. ಸಾಮಾಜಿಕ ಅಂತರ ಪಾಲಿಸಿಕೊಂಡು ವ್ಯವಹಾರ ನಡೆಸಬೇಕು. ಮೀನು ತಿನ್ನುವವರಿಗೆ ಮತ್ತು ಮೀನು ಹಿಡಿಯುವವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿಗೆ ಕರಾವಳಿಯ ಮೀನು ಸದ್ಯಕ್ಕೆ ಸಪ್ಲೈ ಇಲ್ಲ, ಮೂರು ಜಿಲ್ಲೆಗಳ ಬೇಡಿಕೆಗೆ ಮೊದಲ ಆದ್ಯತೆ ಕೊಡಲಾಗುವುದು. ಹೊರ ಜಿಲ್ಲೆ , ಬೆಂಗಳೂರು ಮೀನು ರವಾನೆ ಬಗ್ಗೆ ಮಾರ್ಗಸೂಚಿ ರೂಪಿಸಲಾಗುವುದು. ಒಳನಾಡು ಮೀನುಗಾರಿಕೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
Next Story





